ಕೀರ್ತಿ ಸುರೇಶ್ ಹೊಸ ಸಿನಿಮಾ ವಿರುದ್ಧ ಅಸಮಾಧಾನ ಏಕೆ?

26 SEP 2026

By  Manjunatha

ಕೀರ್ತಿ ಸುರೇಶ್ ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು, ಪ್ರತಿಭಾವಂತ ನಟಿಯೂ ಹೌದು.

     ನಟಿ ಕೀರ್ತಿ ಸುರೇಶ್

‘ಮಹಾನಟಿ’ ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಸಹ ಕಿರ್ತಿ ಸುರೇಶ್ ಪಡೆದುಕೊಂಡಿದ್ದಾರೆ.

ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ

ಅವರ ನಟನೆಯ ‘ದೊರೊತಿ’ ಹೆಸರಿನ ತಮಿಳು ಸಿನಿಮಾ ಇಂದಷ್ಟೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ.

  ತಮಿಳು ಸಿನಿಮಾ ರಿಲೀಸ್

ಸಿನಿಮಾನಲ್ಲಿ ಇಬ್ಬರು ನಾಯಕರು ಇದ್ದು, ಕೀರ್ತಿ ಸುರೇಶ್ ಆ ಸಿನಿಮಾದ ನಾಯಕಿ.

 ಸಿನಿಮಾದ ನಾಯಕಿ ಕೀರ್ತಿ

ಆದರೆ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ನಿಷೇಧಕ್ಕೂ ಆಗ್ರಹಿಸಿದ್ದಾರೆ.

    ಸಾಮಾಜಿಕ ಜಾಲತಾಣ

ಸಿನಿಮಾನಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ‘ಎಲ್​​ಜಿಬಿಟಿಕ್ಯೂ’ ಬಗ್ಗೆ ಚರ್ಚೆ ಮಾಡಿರುವುದೇ ಅದಕ್ಕೆ ಕಾರಣ ಎನ್ನಲಾಗಿದೆ.

     ಕಾರ್ತಿಕ್ ಸುಬ್ಬರಾಜು

ಸಿನಿಮಾನಲ್ಲಿ ‘ಎಲ್​​ಜಿಬಿಟಿಕ್ಯೂ’ ಬಗ್ಗೆ ದೃಶ್ಯಗಳಿವೆಯಂತೆ, ಅಲ್ಲದೆ ಕೆಲವರು ತುಸು ಅತಿಯಾಗಿ ಅದನ್ನು ಪ್ರೇಕ್ಷಕರ ಮೇಲೆ ಹೇರಲಾಗಿದೆ ಎಂದಿದ್ದಾರೆ.

    ‘ಎಲ್​​ಜಿಬಿಟಿಕ್ಯೂ’ ಬಗ್ಗೆ

ಈಗಾಗಲೇ ಕೆಲವರು ಸಿನಿಮಾದ ವಿರುದ್ಧ ನಿಷೇಧ ಹೇರಬೇಕು, ಈ ಸಿನಿಮಾ ನಮ್ಮ ಸಂಸ್ಕೃತಿಗೆ ವಿರುದ್ಧವಾದುದು ಎಂದಿದ್ದಾರೆ.

     ಸಂಸ್ಕೃತಿಗೆ ವಿರುದ್ಧ?