ಒಂದೇ ಹಾಡಿನಿಂದ ಮತ್ತೆ ಬೇಡಿಕೆಗೆ ಬಂದ ಹಾಟ್ ನಟಿ ಕೇತಿಕಾ

08 Apr 2025

By  Manjunatha

ಚಿತ್ರರಂಗದಲ್ಲಿ ಒಂದೇ ಒಂದು ಹಿಟ್ ಸಾಕು ಕಳೆದಕೊಂಡಿದ್ದ ಬೇಡಿಕೆಯನ್ನು ಮರಳಿ ಗಳಿಸಿಕೊಳ್ಳಲು.

       ಒಂದು ಹಿಟ್ ಸಾಕು

ಇದಕ್ಕೆ ತಾಜಾ ಉದಾಹರಣೆ ಕೇತಿಕಾ ಶರ್ಮಾ, ಬೇಡಿಕೆ ಕುಸಿದು ಕುಗ್ಗಿದ್ದ ಕೇತಿಕಾ ಶರ್ಮಾಗೆ ಸಿಕ್ಕ ಒಂದು ಹಿಟ್ ಮತ್ತೆ ಬೇಡಿಕೆ ಹೆಚ್ಚಿಸಿದೆ.

     ನಟಿ ಕೇತಿಕಾ ಶರ್ಮಾ

ಪುರಿ ಜಗನ್ನಾಥ್ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಬಂದ ಕೇತಿಕಾಗೆ ಆರಂಭದಲ್ಲಿ ಬೇಡಿಕೆ ಇತ್ತು, ಅಷ್ಟೇ ಬೇಗ ಅದು ಕರಗಿ ಹೋಯ್ತು.

ಚಿತ್ರರಂಗಕ್ಕೆ ಬಂದ ಕೇತಿಕಾ

2021 ರಲ್ಲಿ ನಟನೆಗೆ ಕಾಲಿಟ್ಟ ಕೇತಿಕಾ ಶರ್ಮಾ ನಟಿಸಿದ ಒಂದೇ ಒಂದು ಸಿನಿಮಾ ಸಹ ದೊಡ್ಡ ಹಿಟ್ ಎನಿಸಿಕೊಳ್ಳಲಿಲ್ಲ.

    ಸಿನಿಮಾ ಹಿಟ್ ಆಗಲಿಲ್ಲ

ಸಿನಿಮಾಗಳೇ ಇಲ್ಲದೆ ಇನ್​ಸ್ಟಾಗ್ರಾಂ ಮಾಡೆಲಿಂಗ್ ಮಾಡುತ್ತಿದ್ದ ಕೇತಿಕಾಗೆ ಮತ್ತೆ ಬೇಡಿಕೆ ತಂದುಕೊಟ್ಟಿದ್ದು ಒಂದು ಹಾಡು.

ಇನ್​ಸ್ಟಾಗ್ರಾಂ ಮಾಡೆಲಿಂಗ್

ರಾಬಿನ್​ಹುಡ್’ ಸಿನಿಮಾದಲ್ಲಿ ಕೇತಿಕಾ ‘ಅದಿದಾ ಸರ್ಪ್ರೈಸು’ ಐಟಂ ಹಾಡಿಗೆ ಸಖತ್ ಹಾಟ್ ಆಗಿ ಡ್ಯಾನ್ಸ್ ಮಾಡಿದರು.

      ‘ಅದಿದಾ ಸರ್ಪ್ರೈಸು’

ಸಿನಿಮಾದ ಹಾಡು ಮತ್ತು ಕೇತಿಕಾ ಶರ್ಮಾ ಹಾಕಿರುವ ಸ್ಟೆಪ್ಪು, ಕಾಣಿಸಿಕೊಂಡಿರುವ ರೀತಿಗೆ ಫ್ಯಾನ್ಸ್ ಫಿದಾ ಆದರು.

  ಫ್ಯಾನ್ಸ್ ಫಿದಾ ಆಗಿದ್ದಾರೆ

ಈಗ ಮತ್ತೆ ಕೇತಿಕಾಗೆ ಬೇಡಿಕೆ ಬಂದಿದ್ದು, ಎರಡು ವರ್ಷದ ಬಳಿಕ ಮತ್ತೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಮತ್ತೆ ಕೇತಿಕಾಗೆ ಬೇಡಿಕೆ

ಕೇತಿಕಾ ಶರ್ಮಾ ಕೈಯಲ್ಲಿ ಈಗ ಎರಡು ಸಿನಿಮಾಗಳಿವೆ. ಅದರಲ್ಲಿ ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾ.

  ಕೈಯಲ್ಲಿ ಈಗ 2 ಸಿನಿಮಾ