ದುರಂತ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ನಟಿ ಕಿಯಾರಾ ಅಡ್ವಾಣಿ

01 NOV 2025

By  Manjunatha

ಬಾಲಿವುಡ್​ನಲ್ಲಿ ಜೀವನ ಆಧರಿಸಿ ಬಯೋಪಿಕ್ ಸಿನಿಮಾಗಳು ತುಸು ಹೆಚ್ಚು.

     ಬಯೋಪಿಕ್ ಸಿನಿಮಾ

ಕ್ರೀಡಾಪಟುಗಳು, ರಾಜಕಾರಣಿಗಳು, ಅಪರಾಧಿಗಳ ಕುರಿತಾಗಿಯೇ ಈ ಬಯೋಪಿಕ್​​ಗಳು ಹೆಚ್ಚು ನಿರ್ಮಾಣ ಆಗುತ್ತವೆ.

ಹೆಚ್ಚು ನಿರ್ಮಾಣ ಆಗುತ್ತವೆ

ಇದೀಗ ಖ್ಯಾತ ನಟಿ, ಕವಯತ್ರಿ ಮತ್ತು ಗಾಯಕಿಯೂ ಆಗಿದ್ದ ಮೀನಾ ಕುಮಾರಿ ಜೀವನ ಸಿನಿಮಾ ಆಗಲಿದೆ.

  ಮೀನಾ ಕುಮಾರಿ ಜೀವನ

ಖ್ಯಾತ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಈ ಸಿನಿಮಾದ ನಾಯಕಿ ಆಗಲಿದ್ದಾರೆ. ಇದು ಅವರ ಕಮ್ ಬ್ಯಾಕ್ ಸಿನಿಮಾ ಆಗಲಿದೆ.

   ನಟಿ ಕಿಯಾರಾ ಅಡ್ವಾಣಿ

ಈ ಪಾತ್ರಕ್ಕೆ ಮೊದಲು ಕೃತಿ ಸೆನೊನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಕಿಯಾರಾ ಅನ್ನು ಅಂತಿಮಗೊಳಿಸಲಾಗಿದೆ.

ಕೃತಿ ಸೆನೊನ್ ಆರಿಸಲಾಗಿತ್

ಕಿಯಾರಾ ಅಡ್ವಾಣಿ ಇತ್ತೀಚೆಗಷ್ಟೆ ತಾಯಿ ಆಗಿದ್ದಾರೆ. ಇದೀಗ ಮೀನಾ ಕುಮಾರಿ ಸಿನಿಮಾ ಅವರ ಕಮ್ ಬ್ಯಾಕ್ ಸಿನಿಮಾ ಆಗಲಿದೆ.

     ಕಮ್ ಬ್ಯಾಕ್ ಸಿನಿಮಾ

ಮೀನಾ ಕುಮಾರಿ ಬಾಲಿವುಡ್​ನ ಹಿರಿಯ ನಟಿ ಆದರೆ ತಮ್ಮ 38ನೇ ವರ್ಷಕ್ಕೆ ದುರಂತ ಅಂತ್ಯವನ್ನು ಅವರು ಕಂಡರು.

 ದುರಂತ ನಾಯಕಿ ಮೀನಾ

ದುರಂತ ನಾಯಕಿಯ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದು, ಸಹಜವಾಗಿಯೇ ಕುತೂಹಲ ಮೂಡಿದೆ.

     ಕುತೂಹಲ ಮೂಡಿದೆ