Pic credit - Instagram

Author: Rajesh Duggumane

05 July 2025

ಆರೇ ತಿಂಗಳಲ್ಲಿ ಸಿನಿಮಾ ಮಾಡ್ತಾರೆ ಕಿಚ್ಚ ಸುದೀಪ್ 

ಹೊಸ ಸಿನಿಮಾ 

ಸುದೀಪ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕೇವಲ ಆರೇ ತಿಂಗಳಲ್ಲಿ ಇದರ ಕೆಲಸ ಪೂರ್ಣಗೊಳಿಸುವ ಆಲೋನೆಯಲ್ಲಿ ಅವರಿದ್ದಾರೆ. 

ಮ್ಯಾಕ್ಸ್ ಯಶಸ್ಸು 

‘ಮ್ಯಾಕ್ಸ್ ಸಿನಿಮಾ ಯಶಸ್ಸು ಕಂಡಿತು. ಇದರ ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. 

ತಮಿಳು ಸಂಸ್ಥೆ 

ತಮಿಳು ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಅವರು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. 

ಕನ್ನಡದ ಸಿನಿಮಾ 

ಇದು ಸುದೀಪ್ ಅವರ ಈ ಚಿತ್ರ ಕನ್ನಡದಲ್ಲೇ ಸಿದ್ಧವಾಗುತ್ತಿದೆ ಅನ್ನೋದು ವಿಶೇಷ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. 

ಜುಲೈ 7

ಜುಲೈ 7ರಂದು ಸಿನಿಮಾ ಶೂಟಿಂಗ್ ಆರಂಭ ಆಗಲಿದೆ. ತಮಿಳುನಾಡಿನಲ್ಲಿ ಇದರ ಶೂಟ್ ನಡೆಯಲಿದೆ ಎಂಬುದು ತಿಳಿದು ಬಂದಿದೆ. 

ಡಿಸೆಂಬರ್ 25

ಡಿಸೆಂಬರ್ 25ರಂದು ಸಿನಿಮಾ ರಿಲೀಸ್ ಮಾಡುವ ಉದ್ದೇಶವನ್ನು ಸುದೀಪ್ ಹಾಗೂ ತಂಡದವರು ಇಟ್ಟುಕೊಂಡಿದ್ದಾರೆ ಅನ್ನೋದು ವಿಶೇಷ. 

ಚಿತ್ರದ ಬಗ್ಗೆ 

ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಕೂಡ ಮಾಸ್ ಎಂಟರ್​ಟೇನ್ ಆಗಿರಲಿದೆ ಎಂಬ ನಿರೀಕ್ಷೆ ಇದೆ. 

ಮ್ಯಾಕ್ಸ್ ಸೂಪರ್ ಹಿಟ್ 

ಮ್ಯಾಕ್ಸ್ ಸೂಪರ್ ಹಿಟ್ ಆದ ಬಳಿಕ ಸುದೀಪ್ ಒಪ್ಪಿಕೊಂಡ ಎರಡನೇ ಸಿನಿಮಾ ಇದು. ಇದರ ಜೊತೆ ಬಿಲ್ಲ ರಂಗ ಬಾಷ ಮಾಡುತ್ತಿದ್ದಾರೆ.