Pic credit - Instagram

Author: Rajesh Duggumane

01 July 2025

ಬ್ಯಾಚುಲರ್ಸ್ ಮೂಲಕ ಮತ್ತಷ್ಟು ಫೇಮಸ್ ಆದ ರಮೋಲಾ 

ಕಿರುತೆರೆ ನಟಿ 

ರಮೋಲಾ ಅವರು ಕಿರುತೆರೆ ನಟಿ. ಅವರಿಗೆ ಈಗ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಎಲ್ಲ ಕಡೆಗಳಲ್ಲಿ ಅವರ ಹೆಸರು ಚಾಲ್ತಿಯಲ್ಲಿ ಇದೆ. 

ಹೊಸ ಶೋ 

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಮೂಲಕ ರಮೋಲಾ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಇದರಲ್ಲಿ ಅವರು ಸ್ಪರ್ಧಿಸಿದ್ದಾರೆ. 

ಬುಲೆಟ್ ಜೊತೆ 

ರಕ್ಷಕ್ ಬುಲೆಟ್ ಅವರು ಈ ಶೋನಲ್ಲಿ ರಮೋಲಾಗೆ ಜೊತೆ ಆಗಿದ್ದಾರೆ. ಈ ಶೋ ಶೀಘ್ರವೇ ಕೊನೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಗೆಲ್ಲೋ ಹಂಬಲ 

ರಮೋಲಾ ಅವರು ಈ ಶೋನ ಗೆಲ್ಲೋ ಹಂಬಲದಲ್ಲಿ ಇದ್ದಾರೆ. ಶೋ ಗೆದ್ದರೆ ಅವರಿಗೆ ಬರೋ ಆಫರ್​ಗಳ ಸಂಖ್ಯೆ ಕೂಡ ಹೆಚ್ಚಲಿದೆ. 

ಧಾರಾವಾಹಿ

ಈ ಮೊದಲು ‘ಕನ್ನಡತಿ’ ಧಾರಾವಾಹಿಯಲ್ಲಿ ರಮೋಲಾ ಅವರು ಸಾನಿಯಾ ಹೆಸರಿನ ಪಾತ್ರವನ್ನು ಮಾಡಿದ್ದರು. 

ಸಿನಿಮಾ ಮಾಡಬೇಕಿತ್ತು.. 

ರಮೋಲಾ ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ರಿಲೀಸ್ ಆಗಿಲ್ಲ ಎಂದು ಹೇಳಲಾಗುತ್ತಿದೆ. 

ಆ್ಯಕ್ಟೀವ್ 

ರಮೋಲಾ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ದಿನ ಕಳೆದಂತೆ ಅವರ ಬೇಡಿಕೆ ಹೆಚ್ಚುತ್ತಲೇ ಇದೆ. 

ಬೆಲ್ಲಿ ಡ್ಯಾನ್ಸ್ 

ರಮೋಲಾ ಅವರು ಸಖತ್ ಆಗಿ ಬೆಲ್ಲಿ ಡ್ಯಾನ್ಸ್ ಮಾಡುತ್ತಾರೆ. ಈ ಸಂದರ್ಭದ ವಿಡಿಯೋಗಳನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.