ಬಾಲಿವುಡ್​​ಗೆ ಹಾರಲಿರುವ ಮಂಗಳೂರು ಮೂಲದ ನಟಿ ಕೃತಿ ಶೆಟ್ಟಿ

13 OCT 2026

By  Manjunatha

ಕೃತಿ ಶೆಟ್ಟಿ ಮಂಗಳೂರು ಮೂಲದ ನಟಿ ಆದರೆ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ.

ಮಂಗಳೂರು ಮೂಲದ ನಟಿ

ಹಿಂದಿಯಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟು, ಹಲವಾರು ಜಾಹೀರಾತುಗಳಲ್ಲಿಯೂ ಸಹ ಅವರು ನಟಿಸಿದ್ದರು.

   ಬಾಲನಟಿಯಾಗಿ ಎಂಟ್ರಿ

ಹಿಂದಿ ಸಿನಿಮಾ ಮೂಲಕ ನಟನೆ ಆರಂಭಿಸಿದರೂ ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾದರು ಕೃತಿ ಶೆಟ್ಟಿ.

 ಹಿಂದಿ ಸಿನಿಮಾ ಮೂಲಕ

‘ಉಪ್ಪೆನ’ ಸಿನಿಮಾದ ಬಳಿಕ ಕೃತಿ ಶೆಟ್ಟಿ ಹಲವಾರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

‘ಉಪ್ಪೆನ’ ಸಿನಿಮಾ ಮೂಲಕ

ಇದೀಗ ಮೊದಲ ಬಾರಿಗೆ ಹಿಂದಿ ಸಿನಿಮಾನಲ್ಲಿ ನಾಯಕಿಯಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ನಟಿ ಕೃತಿ ಶೆಟ್ಟಿ.

     ನಾಯಕಿಯಾಗಿ ಎಂಟ್ರಿ

ವಿಧಿ ಗೋಡ್ಗಾಂವ್​ಕರ್ ನಿರ್ದೇಶನ ಮಾಡಲಿರುವ ಮೊದಲ ಹಿಂದಿ ಸಿನಿಮಾಕ್ಕೆ ಕೃತಿ ಶೆಟ್ಟಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

    ವಿಧಿ ಗೋಡ್ಗಾಂವ್​ಕರ್

ಇದೊಂದು ಆಕ್ಷನ್, ಲವ್ ಸ್ಟೋರಿ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ.

        ಕೃತಿ ಶೆಟ್ಟಿ ನಾಯಕಿ

ಸಿನಿಮಾನಲ್ಲಿ ಕೃತಿ ಶೆಟ್ಟಿ ಅವರದ್ದು ದಕ್ಷಿಣ ಭಾರತದ ಯುವತಿಯ ಪಾತ್ರ ಎನ್ನಲಾಗುತ್ತಿದೆ. ಬಾಲಿವುಡ್​​ನಲ್ಲಿ ಯಶಸ್ಸು ಸಿಗುತ್ತಾ ನೋಡಬೇಕಿದೆ.

       ಯುವತಿಯ ಪಾತ್ರ