ಕೃತಿ ಸನೋನ್ ರಕ್ಷಾ ಬಂಧನ ಜಾಹೀರಾತಿಗೆ ವಿರೋಧ: ಅಂಥಹದ್ದೇನಿದೆ ಅದರಲ್ಲಿ?

25 AUG 2026

By  Manjunatha

ಕೃತಿ ಸನೋನ್, ಬಾಲಿವುಡ್​​ನ ಸ್ಟಾರ್ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರತಿಭಾನ್ವಿತೆ.

 ಬಾಲಿವುಡ್​​ನ ಸ್ಟಾರ್ ನಟಿ

ಕೃತಿ ಸನೋನ್ ತಾವಾಯ್ತು ತಮ್ಮ ಕೆಲಸವಾಯ್ತು ಎಂದಿರುವವರು, ಆದರೆ ಇದೀಗ ವಿವಾದಕ್ಕೆ ಸಿಲುಕಿದ್ದಾರೆ.

   ವಿವಾದಕ್ಕೆ ಸಿಲುಕಿದ್ದಾರೆ

ಕೃತಿ ಸನೋನ್, ಸಾಕಷ್ಟು ಜಾಹೀರಾತುಗಳಲ್ಲಿ ಸಹ ನಟಿಸುತ್ತಾರೆ. ಇತ್ತೀಚೆಗೆ ರಕ್ಷಾ ಬಂಧನ ಜಾಹೀರಾತಿನಲ್ಲಿ ನಟಿಸಿದ್ದರು.

 ಜಾಹೀರಾತು ನಟಿಸುತ್ತಾರೆ

ಕೃತಿ ಸನೋನ್ ನಟಿಸಿರುವ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ಅವರು ಧರಿಸಿರುವ ಬಟ್ಟೆಯ ಬಗ್ಗೆ ಟೀಕೆ ವ್ಯಕ್ತವಾಗಿದೆ.

 ವಿವಾದಕ್ಕೆ ಕಾರಣವಾಗಿದೆ

ಜಾಹೀರಾತಿನಲ್ಲಿ ಕೃತಿ ಸನೋನ್ ಬಿಳಿ ಬಣ್ಣದ ಆದರೆ ತುಸು ಗ್ಲಾಮರಸ್ ಆದ ಉಡುಪನ್ನು ಧರಿಸಿದ್ದಾರೆ.

   ಗ್ಲಾಮರಸ್ ಆದ ಉಡುಪ

ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಸಹ ಕೃತಿ ಸನೋನ್ ಉಡುಪನ್ನು ಟೀಕೆ ಮಾಡಿದ್ದಾರೆ.

    ಕಂಗನಾ ರನೌತ್ ಟೀಕೆ

ಆದರೆ ಕೃತಿ ಸನೋನ್, ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಹಬ್ಬದಲ್ಲಿ ಭಾವನೆಗಳು ಮುಖ್ಯ ಬಟ್ಟೆಗಳಲ್ಲ ಎಂದಿದ್ದಾರೆ.

     ಭಾವನೆಗಳು ಮುಖ್ಯ

ಕೃತಿ ಸನೋನ್ ಮಾತ್ರವೇ ಅಲ್ಲದೆ ಅವರ ಸಹೋದರಿ ನೂಪುರ್ ಸಹ ಕೃತಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

   ನೂಪುರ್ ಸನೊನ್ ಸಹ