ಅಂಡಾಣು ಫ್ರೀಜ್ ಮಾಡಿಸಿದ ಬಾಲಿವುಡ್ ನಟಿ ಕೃತಿ ಸನೋನ್: ಕಾರಣ?

07 July 2026

By  Manjunatha

ಕೃತಿ ಸನೋನ್, ಬಾಲಿವುಡ್​​ನ ಜನಪ್ರಿಯ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಸಹ ಹೌದು.

ಬಾಲಿವುಡ್ ಜನಪ್ರಿಯ ನಟಿ

ಅದ್ಭುತ ನಟಿ ಆಗಿರುವ ಜೊತೆಗೆ ತೆರೆಯಾಚೆಯೂ ಸಹ ಸಖತ್ ಬೋಲ್ಡ್, ಬಹಳ ಧೈರ್ಯವಂತ ನಟಿಯೂ ಹೌದು.

  ಬೋಲ್ಡ್,  ಧೈರ್ಯವಂತ

ಬಾಲಿವುಡ್​​ನ ಕೆಟ್ಟ ಸಂಪ್ರದಾಯಗಳು, ಆಚರಣೆಗಳ ಬಗ್ಗೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು.

  ಮಹಿಳೆ ಮೇಲೆ ದೌರ್ಜನ್ಯ

ಇದೀಗ ನಟಿ ಕೃತಿ ಸನೋನ್ ತಮ್ಮ ಅಂಡಾಣು (ಎಗ್ಸ್) ಫ್ರೀಜ್ ಮಾಡಿಸಿದ್ದಾರೆ. ಅಂದರೆ ಬ್ಯಾಂಕಿಂಗ್ ಮಾಡಿದ್ದಾರೆ.

 ಅಂಡಾಣು (ಎಗ್ಸ್) ಫ್ರೀಜ್

ಮಹಿಳೆಯರಿಗೆ ವಯಸ್ಸಾದಂತೆ ಅಂಡಾಣುವಿನ ಗುಣಮಟ್ಟ ಕಡಿಮೆ ಆಗುತ್ತದೆ, ಹಾಗಾಗಿ ಆರೋಗ್ಯಕರವಾಗಿದ್ದಾಗ ಎಗ್ ಫ್ರೀಜ್ ಮಾಡುವುದು ಉತ್ತಮವೆಂಬುದು ನಟಿಯ ಅಭಿಪ್ರಾಯ.

ಅಂಡಾಣುವಿನ ಗುಣಮಟ್ಟ

‘ಭವಿಷ್ಯದಲ್ಲಿ ತಾಯಿಯಾಗುವ ಹಕ್ಕನ್ನು ಉಳಿಸಿಕೊಳ್ಳಲು ಈ ವೈದ್ಯಕೀಯ ಪದ್ಧತಿ ಸಹಕಾರಿಯಾಗಿದೆ’ ಎಂದಿದ್ದಾರೆ ಕೃತಿ.

     ವೈದ್ಯಕೀಯ ಪದ್ಧತಿ

ಮಿಮಿ’ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದ ಸಮಯದಲ್ಲಿ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾಗಿ ನಟಿ ಹೇಳಿದ್ದಾರೆ.

      ಮಹತ್ವದ ನಿರ್ಧಾರ

ಕೃತಿ ಸನೋನ್ ಮಾತ್ರವಲ್ಲ ಇನ್ನೂ ಹಲವು ನಟಿಯರು, ಕ್ರೀಡಾಪಟುಗಳು ಸಹ ಹೀಗೆ ಅಂಡಾಣುಗಳನ್ನು ಫ್ರೀಜ್ ಮಾಡಿಸಿದ್ದಾರೆ.

       ಹಲವು ನಟಿಯರು