ನಟಿಯರನ್ನು ಕೀಳಾಗಿ ಕಾಣಲಾಗುತ್ತದೆ: ನಟಿ ಕೃತಿ ಸನೋನ್ ಆರೋಪ

04 July 2026

By  Manjunatha

ಕೃತಿ ಸನೋನ್, ಬಾಲಿವುಡ್​​ನ ಸ್ಟಾರ್ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದಿರುವ ನಟಿ ಅವರು.

 ಬಾಲಿವುಡ್​​ನ ಸ್ಟಾರ್ ನಟಿ

ಇದೀಗ ಕೃತಿ ಸನೋನ್, ಬಾಲಿವುಡ್​​ ಬಗ್ಗೆ ವಿಶೇಷವಾಗಿ ಚಿತ್ರೀಕರಣದಲ್ಲಿ ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ಬಗ್ಗೆ ಆರೋಪ ಮಾಡಿದ್ದಾರೆ.

 ಬಾಲಿವುಡ್​​ ಬಗ್ಗೆ ಆರೋಪ

ಲಿಲ್ಲಿ ಸಿಂಗ್ ಜೊತೆಗಿನ ಪಾಡ್​​ಕಾಸ್ಟ್​​ನಲ್ಲಿ ಕೃತಿ ಸನೋನ್, ಚಿತ್ರೀಕರಣದಲ್ಲಿ ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.

    ಪಾಡ್​​ಕಾಸ್ಟ್​​ನಲ್ಲಿ ಕೃತಿ

ಚಿತ್ರೀಕರಣದ ಸೆಟ್‌ಗಳಲ್ಲಿ ಮಹಿಳಾ ಕಲಾವಿದರನ್ನು ಹೇಗೆ ಕೀಳಾಗಿ ಕಾಣಲಾಗುತ್ತದೆ ಎಂದಿದ್ದಾರೆ ನಟಿ ಕೃತಿ ಸನೋನ್.

       ನಟಿ ಕೃತಿ ಸನೋನ್

‘ಒಬ್ಬ ನಟಿ ಪ್ರಶ್ನೆ ಕೇಳಿದರೆ ಸೆಟ್‌ನಲ್ಲಿರುವವರು ‘ಇವಳು ಎಷ್ಟು ಪ್ರಶ್ನೆ ಕೇಳುತ್ತಾಳೆ, ಇನ್ನು ಇವಳ 50 ಪ್ರಶ್ನೆಗಳು ಶುರುವಾಗುತ್ತವೆ’ ಎಂದು ಆಡಿಕೊಳ್ಳುತ್ತಾರೆ ಎಂದಿದ್ದಾರೆ.

ನಟಿಯರ ಆಡಿಕೊಳ್ಳುತ್ತಾರೆ

ಇದೇ ಪ್ರಶ್ನೆಯನ್ನು ಒಬ್ಬ ನಟ ಕೇಳಿದರೆ, ಅವನು ಸಿನಿಮಾದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾನೆ ಎಂದು ಹೊಗಳುತ್ತಾರೆ’ ಎಂದು ಹೇಳಿದ್ದಾರೆ.

     ಒಬ್ಬ ನಟ ಕೇಳಿದರೆ?

ನಾನು ಪ್ರಶ್ನೆ ಕೇಳಿದಾಗ ‘ಹೆಚ್ಚು ತಲೆ ಕೆಡಿಸಿಕೊಳ್ಳಬೇಡ, ಸುಮ್ಮನೆ ನಟಿಸು’ ಎಂದು ಹೇಳುತ್ತಿದ್ದರು ಎಂದು ಕೃತಿ ಹೇಳಿದ್ದಾರೆ.

    ತಲೆ ಕೆಡಿಸಿಕೊಳ್ಳಬೇಡ  

ನಾನು ಎಂಜಿನಿಯರ್ ಆಗಿದ್ದರೂ ಸಹ, ನಾನು ಬಾಲಿವುಡ್​​ನಲ್ಲಿ ಹೆಚ್ಚು ಸವಾಲು ಎದುರಿಸಿದೆ ಎಂದಿದ್ದಾರೆ ಕೃತಿ ಸನೋನ್.

      ಸವಾಲು ಎದುರಿಸಿದೆ