ನಿರ್ಮಾಪಕರಿಗೆ ಧೈರ್ಯವಿಲ್ಲ: ಸಿಟ್ಟು ಹೊರಹಾಕಿದ ಕೃತಿ ಸೆನೊನ್

22 AUG 2025

By  Manjunatha

ಕೃತಿ ಸನೋನ್ ಬಾಲಿವುಡ್​ನ ಜನಪ್ರಿಯ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಅವರು ಪಡೆದಿದ್ದಾರೆ.

       ನಟಿ ಕೃತಿ ಸನೋನ್

ಆದರೆ ಇತ್ತೀಚೆಗೆ ಕೃತಿ ಸನೋನ್​ಗೆ ಅವಕಾಶಗಳು ಕಡಿಮೆ ಆಗಿವೆ ಎನ್ನಲಾಗುತ್ತಿದೆ. ಸದ್ಯಕ್ಕೆ ಅವರ ಕೈಯಲ್ಲಿ 2 ಸಿನಿಮಾಗಳಿವೆ.

 ಕೈಯಲ್ಲಿ 2 ಸಿನಿಮಾಗಳಿವೆ

ಆದರೆ ಕೃತಿ ಸನೋನ್​ ತಮಗೆ ಒಪ್ಪಿಗೆ ಆಗುವಂಥಹಾ ಅವಕಾಶಗಳು ಅರಸಿ ಬರುತ್ತಿಲ್ಲವಂತೆ ಇದು ಅವರಿಗೆ ಸಿಟ್ಟು ತರಿಸಿದೆ.

   ಅವಕಾಶಗಳು ಸಿಗುತ್ತಿಲ್ಲ

ಅಲ್ಲದೆ ಬಾಲಿವುಡ್​​ನಲ್ಲಿರುವ ಲಿಂಗ ಭೇದದ ಬಗ್ಗೆಯೂ ಸಹ ಕೃತಿ ಸನೋನ್ ಆಕ್ಷೆಪಣೆ ವ್ಯಕ್ತಪಡಿಸಿದ್ದಾರೆ.

       ಲಿಂಗ ಭೇದದ ಬಗ್ಗೆ

ಬಾಲಿವುಡ್ ನಿರ್ಮಾಪಕರಿಗೆ ನಾಯಕಿಯರ ಮೇಲೆ ನಂಬಿಕೆ ಇಲ್ಲ, ಅವರ ಮೇಲೆ ಹಣ ಹೂಡುವುದಿಲ್ಲ ಎಂದಿದ್ದಾರೆ.

   ನಿರ್ಮಾಪಕರಿಗೆ ನಂಬಿಕೆ

ನಾಯಕಿ ಪ್ರಧಾನ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರಿಗೆ ಧೈರ್ಯವಿಲ್ಲ ಎಂದು ಕೃತಿ ಸೆನೋನ್ ಆರೋಪಿಸಿದ್ದಾರೆ.

ಬಾಲಿವುಡ್ ನಿರ್ಮಾಪಕರು

ಕೆಲವು ಪಾತ್ರಗಳಿಗೆ, ಸನ್ನಿವೇಶಗಳಿಗೆ, ಕೆಲವು ಕೆಲಸಗಳಲ್ಲಿ ಲಿಂಗ ಭೇದ ಇಲ್ಲ ಹಾಗಿದ್ದಮೇಲೆ ಸಂಬಳದಲ್ಲಿ ವ್ಯತ್ಯಾಸ ಏಕೆಂದು ಪ್ರಶ್ನೆ ಮಾಡಿದ್ದಾರೆ.

        ಲಿಂಗ ಭೇದ ಇಲ್ಲ

ಕೃತಿ ಸನೋನ್ ಪ್ರಸ್ತುತ ‘ಕಾಕ್​ಟೇಲ್ 2’ ಮತ್ತು ‘ತೇರೆ ಇಷ್ಕ್ ಮೇ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

      ಇರುವ ಸಿನಿಮಾಗಳು