‘ಪುಷ್ಪ’ ನಿರ್ದೇಶಕನ ಕೊಂಡಾಡಿದ ಬಾಲಿವುಡ್ ಬೆಡಗಿ ಕೃತಿ ಸನೊನ್

10DEC 2025

By  Manjunatha

ಕೃತಿ ಸನೊನ್ ಬಾಲಿವುಡ್​ನ ಬಹು ಬೇಡಿಕೆಯ ನಟಿ, ಸುಂದರಿ ಆಗಿರುವ ಜೊತೆಗೆ ಪ್ರತಿಭಾವಂತ ನಟಿ ಸಹ.

       ನಟಿ ಕೃತಿ ಸನೊನ್

‘ಮೀಮಿ’ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಕೃತಿ ಸನೊನ್ ಪಡೆದುಕೊಂಡಿದ್ದಾರೆ.

    ನಟನೆಗೆ ರಾಷ್ಟ್ರಪ್ರಶಸ್ತಿ

ಅಸಲಿಗೆ ಕೃತಿ ಸನೊನ್ ಬಾಲಿವುಡ್ ನಟಿಯಾದರೂ ನಟನೆಗೆ ಪದಾರ್ಪಣೆ ಮಾಡಿದ್ದು ದಕ್ಷಿಣದ ಸಿನಿಮಾ ಮೂಲಕ.

ದಕ್ಷಿಣದ ಸಿನಿಮಾ ಮೂಲಕ

ಮಹೇಶ್ ಬಾಬು ನಟನೆಯ ‘ನೇನೊಕ್ಕಡಿನೆ’ ಸಿನಿಮಾ ಮೂಲಕ ಕೃತಿ ಸನೊನ್ ಅವರು ನಟನೆಗೆ ಪದಾರ್ಪಣೆ ಮಾಡಿದರು.

  ಮಹೇಶ್ ಬಾಬು ಜೊತೆಗೆ

‘ನೇನೊಕ್ಕಡಿನೆ’ ಸಿನಿಮಾವನ್ನು ಈಗಿನ ಸ್ಟಾರ್ ನಿರ್ದೇಶಕ ‘ಪುಷ್ಪ’ ಖ್ಯಾತಿಯ ಸುಕುಮಾರ್ ನಿರ್ದೇಶಿಸಿದ್ದರು.

   ಸುಕುಮಾರ್ ನಿರ್ದೇಶನ

ನನ್ನ ಮೊದಲ ಸಿನಿಮಾನಲ್ಲಿ ಸುಕುಮಾರ್ ಬಹಳ ಸಹಾಯ ಮಾಡಿದರು. ಅವರೊಬ್ಬ ಬಹಳ ಸ್ವೀಟ್ ವ್ಯಕ್ತಿ ಎಂದಿದ್ದಾರೆ ಕೃತಿ.

       ಬಹಳ ಸ್ವೀಟ್ ವ್ಯಕ್ತಿ

ಸುಕುಮಾರ್ ಅವರಿಗೆ ಸುಳ್ಳು ಹೇಳಲು ಬರುವುದಿಲ್ಲ, ನಕಲಿಯಾಗಿ ನಟಿಸಲು ಬರುವುದಿಲ್ಲ, ಅವರೊಬ್ಬ ನಿಜವಾದ ಮನುಷ್ಯ ಎಂದಿದ್ದಾರೆ.

      ನಿಜವಾದ ಮನುಷ್ಯ

ಸಿನಿಮಾದ ಬಗ್ಗೆ ಸಾಕಷ್ಟು ವಿಷಯಗಳನ್ನು ಸುಕುಮಾರ್ ಅವರಿಂದ ‘ನೇನೊಕ್ಕಡಿನೆ’ ಸಿನಿಮಾದಿಂದ ಕಲಿತೆ ಎಂದಿದ್ದಾರೆ ಕೃತಿ.

     ಕಲಿಕೆಗೆ ವೇದಿಕೆ: ಕೃತಿ