ಅವಕಾಶವೇ ಇಲ್ಲದಾಯ್ತೆ ಪ್ರತಿಭಾವಂತ ನಟಿ ಕೃತಿ ಶೆಟ್ಟಿಗೆ?

23 SEP 2026

By  Manjunatha

ಕೃತಿ ಶೆಟ್ಟಿ, ಕರ್ನಾಟಕ ಮೂಲದ ನಟಿ ಆದರೆ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಮಿಂಚಿದ್ದು ತೆಲುಗು ಸಿನಿಮಾಗಳಲ್ಲಿ.

 ಕರ್ನಾಟಕ ಮೂಲದ ನಟಿ

2021 ರ ಕೋವಿಡ್ ಸಮಯದಲ್ಲಿ ಬಂದ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು ಕೃತಿ ಶೆಟ್ಟಿ.

     ನಾಯಕಿಯಾಗಿ ಎಂಟ್ರಿ

ಮೊದಲ ಸಿನಿಮಾನಲ್ಲಿ ಅವರ ನಟನೆ ನೋಡಿ ಈಕೆ ಖಂಡಿತ ದೊಡ್ಡ ಸ್ಟಾರ್ ನಟಿ ಆಗಲಿದ್ದಾರೆ ಎಂದೆ ಎಲ್ಲರೂ ಭಾವಿಸಿದ್ದರು.

   ಸ್ಟಾರ್ ನಟಿ ಆಗಲಿದ್ದಾರೆ

ಅದರಂತೆ ಆರಂಭದಲ್ಲಿ ಒಂದರ ಹಿಂದೊಂದು ಸಿನಿಮಾಗಳಲ್ಲಿ ಸ್ಟಾರ್ ನಟರುಗಳ ಎದುರು ನಟನೆ ಮಾಡಿದರು ಕೃತಿ.

     ಒಂದರ ಹಿಂದೊಂದು

ಆದರೆ ಇತ್ತೀಚೆಗೆ ಅವರಿಗೆ ಅವಕಾಶಗಳೇ ಕಡಿಮೆ ಆದಂತಾಗಿವೆ. ಅವರು ನಟಿಸಿದ ಸಿನಿಮಾಗಳು ದೊಡ್ಡ ಹಿಟ್ ಸಹ ಆಗುತ್ತಿಲ್ಲ.

     ನಟಿಸಿದ ಸಿನಿಮಾಗಳು

2022 ರಲ್ಲಿ ಕೃತಿ ಶೆಟ್ಟಿ ನಟಿಸಿದ್ದ ನಾಲ್ಕು ಸಿನಿಮಾಗಳು ರಿಲೀಸ್ ಆಗಿ ಹಿಟ್ ಎನಿಸಿಕೊಂಡಿದ್ದವು. 2023 ರಲ್ಲಿ ಬಿಡುಗಡೆ ಆಗಿದ್ದು ಒಂದೇ ಸಿನಿಮಾ.

     ನಾಲ್ಕು ಸಿನಿಮಾಗಳು

ಈ ವರ್ಷ ಈಗಾಗಲೇ ಕೃತಿ ಶೆಟ್ಟಿ ನಟನೆಯ ಎರಡು ಸಿನಿಮಾ ರಿಲೀಸ್ ಆಗಿವೆ. ಎರಡೂ ಸಿನಿಮಾಗಳು ನಿರೀಕ್ಷಿತ ಪ್ರದರ್ಶನ ಕಂಡಿಲ್ಲ.

  ಎರಡು ಸಿನಿಮಾ ರಿಲೀಸ್

ಇದೀಗ ‘ಜೀನಿ’ ಹೆಸರಿನ ತಮಿಳು ಸಿನಿಮಾನಲ್ಲಿ ಕೃತಿ ಶೆಟ್ಟಿ ನಟನೆ ಮಾಡುತ್ತಿದ್ದಾರೆ. ಈ ವರ್ಷವೇ ಅದೂ ರಿಲೀಸ್ ಆಗಲಿದೆ.

    ತಮಿಳು ಸಿನಿಮಾನಲ್ಲಿ