ಸಂತೋಷ್ ಬಾಲರಾಜ್ ನಿಧನ, ನಟಿಸಿದ್ದ ಸಿನಿಮಾಗಳು ಇನ್ನಿತರೆ ಮಾಹಿತಿ

05 AUG 2025

By  Manjunatha

‘ಕರಿಯ’ ಸಿನಿಮಾದ ನಿರ್ಮಾಪಕ ಆನೆಕಲ್ ಬಾಲರಾಜ್ ಅವರ ಪುತ್ರ ನಟ, ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ.

ಆನೆಕಲ್ ಬಾಲರಾಜ್ ಮಗ

ಅವರು ಜಾಂಡೀಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಬನಶಂಕರಿಯ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ನಿಧನ ಹೊಂದಿದ್ದಾರೆ.

     ನಿಧನ ಹೊಂದಿದ್ದಾರೆ

ಸಂತೋಷ್ ಅವರು ‘ಕೆಂಪ’, ‘ಕರಿಯ 2’, ‘ಗಣಪ’, ‘ಜನ್ಮ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗಣಪ’, ‘ಕರಿಯ 2’ ಯಶಸ್ಸು ಗಳಿಸಿತ್ತು.

  ನಟಿಸಿರುವ ಸಿನಿಮಾಗಳು

38 ವರ್ಷದ ಸಂತೋಷ್ ಬಾಲರಾಜ್​ಗೆ ಮದುವೆ ಆಗಿರಲಿಲ್ಲ, ಅವರು ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ.

      ತಾಯಿ ಮತ್ತು ತಂಗಿ

ನಿರ್ಮಾಪಕ ಆನೆಕಲ್ ಬಾಲರಾಜ್ ಅವರು ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಈಗ ಸಂತೋಷ್ ನಿಧನ ಹೊಂದಿದ್ದಾರೆ.

ತಂದೆ ನಿಧನ ಹೊಂದಿದ್ದರು

ಸಂತೋಷ್ ಬಾಲರಾಜ್ ಅವರು ‘ಬರ್ಕ್ಲಿ’, ‘ಸತ್ಯಂ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಆದರೆ ಆ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ.

 ಬಿಡುಗಡೆ ಆಗದ ಸಿನಿಮಾ

ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಸಂತೋಷ್ ಬಾಲರಾಜ್ ಅವರಿಗೆ ಅಪಾರ ಸ್ನೇಹ ಬಳಗ ಇತ್ತು ಎನ್ನಲಾಗಿದೆ.

      ಸ್ನೇಹಮಯ ವ್ಯಕ್ತಿತ್ವ

ಸಂತೋಷ್ ಬಾಲರಾಜ್ ಅವರ ಅಂತಿಮ ಸಂಸ್ಕಾರ ಆನೆಕಲ್​​ನಲ್ಲಿಯೇ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ.

    ಸಂತೋಷ್ ಬಾಲರಾಜ್