‘ಲೋಕಃ’ ನಾಯಕಿ ಕಲ್ಯಾಣಿ ಯಾರು? ಹಿನ್ನೆಲೆ ಏನು ಗೊತ್ತೆ?

05 SEP 2025

By  Manjunatha

ಮಲಯಾಳಂ ಸಿನಿಮಾ ‘ಲೋಕಃ’ ಸಖತ್ ಸದ್ದು ಮಾಡುತ್ತಿದೆ. ಭಾರತದ ಈ ವರೆಗೆ ಅತ್ಯುತ್ತಮ ಸೂಪರ್ ಹೀರೋ ಸಿನಿಮಾ ಎನ್ನಲಾಗುತ್ತಿದೆ.

ಮಲಯಾಳಂನ ‘ಲೋಕಃ’

ನಾಯಕಿ ಪ್ರಧಾನ ಸಿನಿಮಾ ಇದಾಗಿದ್ದು, ಕಲ್ಯಾಣಿ ಪ್ರಿಯದರ್ಶನ್ ಸೂಪರ್ ಹೀರೋ ಆಗಿ ಸಖತ್ ಮಿಂಚಿದ್ದಾರೆ.

 ನಾಯಕಿ ಪ್ರಧಾನ ಸಿನಿಮಾ

ಅಂದಹಾಗೆ ಕಲ್ಯಾಣಿ ಪ್ರಿಯದರ್ಶಿಣಿ ನಟಿಯಾಗಲು ಚಿತ್ರರಂಗಕ್ಕೆ ಬಂದವರಲ್ಲ ಅವರ ಕನಸು ಬೇರೆ ಏನೋ ಇತ್ತು.

ನಟಿಯಾಗಲು  ಬಂದವರಲ್ಲ

ಕಲ್ಯಾಣಿ ಪ್ರಿಯದರ್ಶನ್, ಲೆಜೆಂಡರಿ ನಿರ್ದೇಶಕ ಪ್ರಿಯದರ್ಶನ್ ಹಾಗೂ ಮಲಯಾಳಂ ನಟಿ ಲಿಸ್ಸಿಯ ಪುತ್ರಿ.

     ಪ್ರಿಯದರ್ಶನ್ ಪುತ್ರಿ

ಕಲ್ಯಾಣಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಚೆನ್ನೈನಲ್ಲಿ, ಬಳಿಕ ಪಧವಿ ಪಡೆದಿದ್ದು ಸಿಂಗಪುರ ಮತ್ತು ನ್ಯೂಯಾರ್ಕ್​​​ಗಳಲ್ಲಿ.

      ಶಿಕ್ಷಣ ಮುಗಿಸಿದ್ದೆಲ್ಲಿ

ಕಲ್ಯಾಣಿಗೆ ಕಲಾ ನಿರ್ದೇಶಕಿ ಆಗಬೇಕೆಂಬ ಆಸೆಯಂತೆ. ಹಾಗಾಗಿ ಖ್ಯಾತ ಆರ್ಟ್ ಡಿಸೈನರ್ ಸಾಬು ಸಿರಿಲ್ ಅವರ ಸಹಾಯಕಿಯಾಗಿ ಉದ್ಯೋಗ ಆರಂಭಿಸಿದರು.

  ಸಾಬು ಸಿರಿಲ್ ಸಹಾಯಕಿ

‘ಕ್ರಿಶ್ 3’, ‘ಇರು ಮುಗನ್’ ಇನ್ನೂ ಕೆಲವು ಸಿನಿಮಾಗಳಿಗೆ ಸಾಬು ಸಿರಿಲ್ ಅವರೊಟ್ಟಿಗೆ ಕೆಲಸ ಮಾಡಿದರು ಕಲ್ಯಾಣಿ.

     ‘ಕ್ರಿಶ್ 3’ ಸಿನಿಮಾದಲ್ಲಿ

ಬಳಿಕ ತೆಲುಗಿನ ‘ಹಲೊ’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಅದಕ್ಕೆ ಮುಂಚೆ ಪಾಂಡಿಚೆರಿಯಲ್ಲಿ ನಟನೆ ತರಬೇತಿ ಪಡೆದಿದ್ದರು.

    ನಾಯಕಿಯಾಗಿ ಎಂಟ್ರಿ