ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಮಹೇಶ್ ಬಾಬು ಅಕ್ಕನ ಮಗಳು, ಇಲ್ಲಿವೆ ಚಿತ್ರಗಳು

04 NOV 2025

By  Manjunatha

ಮಹೇಶ್ ಬಾಬು ಅವರ ಗಟ್ಟಿಮನೇನಿ ಕುಟುಂಬ ತೆಲುಗು ಚಿತ್ರರಂಗದ ಜನಪ್ರಿಯ ಸಿನಿ ಕುಟುಂಬಗಳಲ್ಲಿ ಒಂದು.

ಮಹೇಶ್ ಬಾಬು ಕುಟುಂಬ

ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರು ತೆಲುಗು ಚಿತ್ರರಂಗದ ಲೆಜೆಂಡರಿ ನಟ, ಸೂಪರ್ ಸ್ಟಾರ್ ಕೃಷ್ಣ ಎಂದೇ ಜನಪ್ರಿಯರು.

    ಮಹೇಶ್ ಬಾಬು ತಂದೆ

ಮಹೇಶ್ ಬಾಬು ನಾಯಕನಾಗಿ ದೊಡ್ಡ ಹೆಸರು ಮಾಡಿದ್ದಾರೆ. ಅಸಲಿಗೆ ಅವರ ಅಕ್ಕ ಮಂಜುಳಾ ಸಹ ನಟಿ ಮತ್ತು ನಿರ್ಮಾಪಕಿ ಸಹ.

  ಮಂಜುಳಾ ಗಟ್ಟಿಮನೇನಿ

ಮಹೇಶ್ ಬಾಬು ಅವರ ಅಕ್ಕ ಮಂಜುಳಾ ಗಟ್ಟಿಮನೇನಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ಮಾಣ, ನಿರ್ದೇಶನ ಸಹ ಮಾಡಿದ್ದಾರೆ.

    ನಿರ್ಮಾಣ, ನಿರ್ದೇಶನ

ಇದೀಗ ಮಂಜುಳಾ ಗಟ್ಟಿಮನೇನಿ ಪುತ್ರಿ ಜಾನವಿ ಸ್ವರೂಪ್ ಚಿತ್ರರಂಗಕ್ಕೆ ಕಾಲಿಡಲು ರೆಡಿ ಆಗಿದ್ದಾರೆ.

    ಪುತ್ರಿ ಜಾನವಿ ಸ್ವರೂಪ್

ಜಾನವಿ ಸ್ವರೂಪ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಈ ವಿಷಯವನ್ನು ತಾಯಿ ಮಂಜುಳಾ ಹಂಚಿಕೊಂಡಿದ್ದಾರೆ.

        ಚಿತ್ರರಂಗಕ್ಕೆ ಎಂಟ್ರಿ

ಮಗಳ ಮೊದಲ ಸಿನಿಮಾವನ್ನು ತಾಯಿ ಮಂಜುಳಾ ಅವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

 ನಿರ್ಮಾಣ ಮಾಡಲಿದ್ದಾರೆ

ಜಾನ್ವಿ ಅವರ ಮೊದಲ ಸಿನಿಮಾ ಒಪ್ಪಂದ ಈಗಾಗಲೇ ಆಗಿದ್ದು, ಕೆಲವೇ ದಿನಗಳಲ್ಲಿ ಸಿನಿಮಾದ ಘೋಷಣೆ ಆಗಲಿದೆ.

      ಸಿನಿಮಾದ ಘೋಷಣೆ