Pic credit - Instagram

Author: Rajesh Duggumane

01 Aug 2025

ಹೋಟೆಲ್​ ರೂಂನಲ್ಲಿ ನಟ ನವಾಸ್ ಕಲಾಭವನ್ ಶವ ಪತ್ತೆ 

ನವಾಸ್ ಕಲಾಭವನ್

ಮಲಯಾಳಂ ನಟ ಹಾಗೂ ಮಿಮಿಕ್ರಿ ಕಲಾವಿದ ನವಾಸ್ ಕಲಾಭವನ್ ನಿಧನ ಹೊಂದಿದ್ದಾರೆ.

51 ವರ್ಷ 

ನವಾಸ್ ಅವರಿಗೆ 51 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. 

ಹೋಟೆಲ್​ನಲ್ಲಿ

ಹೋಟೆಲ್​ನಲ್ಲಿ ಮಲಗಿದ್ದ ವೇಳೆಯೇ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ.

ಹೃದಯಾಘಾತ 

ನವಾಸ್ ಅವರಿಗೆ ಹೃದಯಾಘಾತ ಆಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ. 

ಮರಣೋತ್ತರ ಪರೀಕ್ಷೆ 

ಶನಿವಾರ ನವಾಸ್ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ. 

ಸಿನಿಮಾ ಶೂಟ್ 

ಮಲಯಾಳಂ ಸಿನಿಮಾ ಒಂದರ ಶೂಟ್​ನಲ್ಲಿ ನವಾಸ್ ಭಾಗಿ ಆಗಿದ್ದರು. ಶುಕ್ರವಾರ ಶೂಟ್ ನಡೆದಿತ್ತು. 

ಹೋಟೆಲ್​ನಲ್ಲಿ ವಾಸ 

ಆ ಬಳಿಕ ನವಾಸ್ ಅವರು ಹೋಟೆಲ್​ನಲ್ಲಿ ವಾಸವಿದ್ದರು. ಅಲ್ಲಿಯೇ ಅವರು ನಿಧನ ಹೊಂದಿದ್ದಾರೆ. 

ಹಲವು ಕ್ಷೇತ್ರ 

ಮಿಮಿಕ್ರಿ ಕಲಾವಿದನಾಗಿ, ನಟನಾಗಿ ನವಾಸ್ ಅವರು ಫೇಮಸ್ ಆಗಿದ್ದಾರೆ. ಅವರ ಅಗಲಿಕೆಗೆ ಫ್ಯಾನ್ಸ್ ಕಂಬನಿ ಮಿಡಿದಿದ್ದಾರೆ.