ಅಲ್ಲು ಅರ್ಜುನ್ ‘ರಾಕಾ’ ಸಿನಿಮಾ ಸೇರಿದ ಮತ್ತೊಬ್ಬ ನಟಿ: ಯಾರೀಕೆ ಫೆಮಿನಾ ಜಾರ್ಜ್?

02 June 2026

By  Manjunatha

ಅಲ್ಲು ಅರ್ಜುನ್ ನಟನೆಯ ‘ರಾಕಾ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಇದು ಬಹು ನಿರೀಕ್ಷಿತ ಸಿನಿಮಾ ಆಗಿದೆ.

  ಅಲ್ಲು ಅರ್ಜುನ್ ಸಿನಿಮಾ

‘ರಾಕಾ’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ, ಇವರ ಜೊತೆಗೆ ರಶ್ಮಿಕಾ ಮಂದಣ್ಣ ಸಹ ಇದ್ದಾರೆ.

     ‘ರಾಕಾ’ ಸಿನಿಮಾನಲ್ಲಿ

ಇದೀಗ ಅಲ್ಲು ಅರ್ಜುನ್ ಅವರ ‘ರಾಕಾ’ ತಂಡವನ್ನು ಮತ್ತೊಬ್ಬ ನಟಿ ಸಹ ಸೇರಿಕೊಂಡಿದ್ದಾರೆ.

  ‘ರಾಕಾ’ ತಂಡ ಸೇರಿದ್ದಾರೆ

ಮಲಯಾಳಂ ನಟಿ ಫೆಮಿನಾ ಜಾರ್ಜ್ ಅವರು ಇದೀಗ ಅಲ್ಲು ಅರ್ಜುನ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ.

    ನಟಿ ಫೆಮಿನಾ ಜಾರ್ಜ್

ಫೆಮಿನಾ ಜಾರ್ಜ್ ಅವರು ಮಲಯಾಳಂ ಚಿತ್ರರಂಗದ ನಟಿ, ಇದು ಅವರ ಮೊದಲ ಪರಭಾಷಾ ಸಿನಿಮಾ.

  ಮಲಯಾಳಂ ಚಿತ್ರರಂಗ

ಮಲಯಾಳಂನ ಸೂಪರ್ ಹಿಟ್ ‘ಮಿನ್ನಲ್ ಮುರಳಿ’ ಫೆಮಿನಾ ಅವರ ಮೊಟ್ಟ ಮೊದಲ ಸಿನಿಮಾ ಆಗಿತ್ತು.

‘ಮಿನ್ನಲ್ ಮುರಳಿ’ ನಾಯಕಿ

ಆ ನಂತರ ಎರಡು ಹಾಸ್ಯ ಪ್ರಧಾನ, ಕಡಿಮೆ ಬಜೆಟ್​​ನ ಮಲಯಾಳಂ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

 ಕಡಿಮೆ ಬಜೆಟ್​​ನ ಸಿನಿಮಾ

ಇದೀಗ ‘ರಾಕಾ’ ಸಿನಿಮಾ ಮೂಲಕ ಒಮ್ಮೆಲೆ ಫೆಮಿನಾ ಅವರಿಗೆ ಭಾರಿ ದೊಡ್ಡ ಅವಕಾಶ ಒದಗಿ ಬಂದಿದೆ.

    ದೊಡ್ಡ ಆಫರ್ ಸಿಕ್ಕಿದೆ