ಒಂದೇ ಸಿನಿಮಾದಿಂದ ಅದೃಷ್ಟ ಬದಲು, ಮಮಿತಾ ಬೈಜು ಈಗ ಸ್ಟಾರ್ ನಟಿ

18 OCT 2025

By  Manjunatha

ಮಲಯಾಳಂ ನಟಿ ಮಮಿತಾ ಬೈಜು ಈಗ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ.

    ನಟಿ ಮಮಿತಾ ಬೈಜು

ತಮಿಳಿನ ಸ್ಟಾರ್ ನಟ ವಿಜಯ್, ಸೂರ್ಯ ಇನ್ನೂ ಕೆಲವರ ಸಿನಿಮಾಗಳಿಗೆ ಈಗ ಮಮಿತಾ ಬೈಜು ನಾಯಕಿ ಆಗಿದ್ದಾರೆ.

 ತಮಿಳಿನ ಸ್ಟಾರ್ ವಿಜಯ್

ಮಮಿತಾ ಬೈಜು 2017ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು, ಆದರೆ ಅವರಿಗೆ ಯಶಸ್ಸು ಎಂಬುದು ದೊರಕಿರಲೇ ಇಲ್ಲ.

     2017ರಲ್ಲಿ ಚಿತ್ರರಂಗಕ್ಕೆ

2017 ರಿಂದ 2024ರ ವರೆಗೆ ಸತತವಾಗಿ 15 ಮಲಯಾಳಂ ಸಿನಿಮಾಗಳಲ್ಲಿ ಮಮತಾ ಬೈಜು ನಟಿಸಿದರು. ಆದರೆ ಅವರಿಗೆ ಜನಪ್ರಿಯತೆ ಸಿಗಲಿಲ್ಲ.

       15  ಸಿನಿಮಾಗಳಲ್ಲಿ

ಆದರೆ 2024ರಲ್ಲಿ ಬಿಡುಗಡೆ ಆದ ‘ಪ್ರೇಮಲು’ ಸಿನಿಮಾದ ದೊಡ್ಡ ಹಿಟ್ ಆಯ್ತು, ಮಮಿತಾ ನಟನೆಗೆ ಭೇಷ್ ಎಂದರು ಜನ.

  ‘ಪ್ರೇಮಲು’ ಸಿನಿಮಾ ನಟಿ

‘ಪ್ರೇಮಲು’ ಸಿನಿಮಾದ ಬಳಿಕ ಮಮಿತಾಗೆ ಅವಕಾಶಗಳ ಸುರಿಮಳೆ ಆಗುತ್ತಿವೆ. ತಮಿಳಿನ ದೊಡ್ಡ ಸ್ಟಾರ್​​ ನಟರುಗಳಿಗೆ ಮಮತಾ ನಾಯಕಿ.

    ಅವಕಾಶಗಳ ಸುರಿಮಳೆ

ದಳಪತಿ ವಿಜಯ್ ಜೊತೆ ‘ಜನ ನಾಯಗನ್’, ಸೂರ್ಯ ಜೊತೆಗೆ ಹೊಸ ಸಿನಿಮಾ ಮತ್ತು ಧನುಶ್ ಜೊತೆ ಅವರ 54ನೇ ಸಿನಿಮಾಕ್ಕೆ ಮಮಿತಾ ನಾಯಕಿ.

     ಸ್ಟಾರ್ ನಟರ ಜೊತೆಗೆ

ಇತ್ತೀಚೆಗೆ ಇವರ ‘ಡ್ಯೂಡ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಭರ್ಜರಿ ಯಶಸ್ಸು ಗಳಿಸುತ್ತಿದೆ.

   ‘ಡ್ಯೂಡ್’ ಸಿನಿಮಾ ಹಿಟ್