Pic credit - Instagram

Author: Rajesh Duggumane

14 April 2025

‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದೇಕೆ? 

ಮೇಘಾ ಶೆಟ್ಟಿ ಅವರು ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. 

ಮೇಘಾ ಶೆಟ್ಟಿ 

ತ್ರಿವಿಕ್ರಂ ಹಾಗೂ ಪ್ರತಿಮಾ ಒಟ್ಟಾಗಿ ನಟಿಸುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿ ಪ್ರೋಮೋದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 

ಮುದ್ದು ಸೊಸೆ 

ಹಾಗಾದರೆ ಈ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಕೂಡ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡೋದು ಸಹಜ. 

ಅವರು ನಟಿಸ್ತಾರಾ?

‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ನಟಿಸುತ್ತಿಲ್ಲ, ಅವರದ್ದು ನಿರ್ಮಾಣ. 

ನಟನೆ ಅಲ್ಲ 

ಮೇಘಾ ಶೆಟ್ಟಿಗೆ ನಿರ್ಮಾಣದಲ್ಲಿ ಸಾಕಷ್ಟು ಅನುಭವ ಸಿಕ್ಕಿದೆ. ಅವರು ಹೊಸ ಹೊಸ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. 

ನಿರ್ಮಾಣದಲ್ಲಿ ಅನುಭವ 

ಈ ಮೊದಲು ಕಲರ್ಸ್​ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಧಾರಾವಾಹಿಯನ್ನು ಮೇಘಾ ಅವರೇ ನಿರ್ಮಾಣ ಮಾಡಿದ್ದರು. 

ಈ ಮೊದಲು 

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 

ಜೊತೆ ಜೊತೆಯಲಿ 

ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಅವರು ನಟಿಸಿದ್ದಾರೆ.  ಅವರು ಈಗ ನಿರ್ಮಾಣದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. 

ಸಿನಿಮಾಗಳಲ್ಲಿ ನಟನೆ