ಕನ್ನಡ ಚಿತ್ರರಂಗಕ್ಕೆ ಬಂದ ಮಿಸ್ ಯೂನಿವರ್ಸ್ ಇಂಡಿಯಾ, ಯಾರೀಕೆ?

31 July 2026

By  Manjunatha

ಕನ್ನಡ ಚಿತ್ರರಂಗ ಹಲವು ಸ್ಟಾರ್ ನಟಿಯರಿಗೆ ಮೊದಲ ಅವಕಾಶ ನೀಡಿದೆ. 

ಮೊದಲ ಅವಕಾಶ ನೀಡಿದೆ

ಕನ್ನಡ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ಹಲವರು ಸ್ಟಾರ್ ಆಗಿದ್ದಾರೆ. ದೀಪಿಕಾ ಪಡುಕೋಣೆ ಇದಕ್ಕೊಂದು ಉದಾಹರಣೆ.

     ದೀಪಿಕಾ ಪಡುಕೋಣೆ

ಇದೀಗ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಗೆದ್ದಿರುವ ಸುಂದರಿಯೊಬ್ಬರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

      ಎಂಟ್ರಿ ಕೊಟ್ಟಿದ್ದಾರೆ

ಮಿಸ್ ಯೂನಿವರ್ಸ್ ಇಂಡಿಯಾ ಎನಿಸಿಕೊಂಡಿರುವ ಮನ್ನಿಕಾ ವಿಶ್ವಕರ್ಮ ಕನ್ನಡ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

  ಯೂನಿವರ್ಸ್ ಇಂಡಿಯಾ

ಸಿಪಿ ಯೋಗೇಶ್ವರ್ ಪುತ್ರ ಧ್ಯಾನ್ ನಾಯಕನಾಗಿ ನಟಿಸುತ್ತಿರುವ ಸಿನಿಮಾನಲ್ಲಿ ಮನ್ನಿಕಾ ನಾಯಕಿ ಆಗಿದ್ದಾರೆ.

   ಸಿಪಿ ಯೋಗೇಶ್ವರ್ ಪುತ್ರ

ಸಿನಿಮಾಕ್ಕೆ ‘ಕರ್ಣಾಟ ಬಲಂ’ ಎಂದು ಹೆಸರಿಡಲಾಗಿದ್ದು, ಉತ್ತರ ಕರ್ನಾಟಕದಲ್ಲಿ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

 ‘ಕರ್ಣಾಟ ಬಲಂ’ ಸಿನಿಮಾ

ಮನ್ನಿತಾ ವಿಶ್ವಕರ್ಮ 2025 ರ ಮಿಸ್ ಯೂನಿವರ್ಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ವಿಜೇತೆ ಆಗಿದ್ದಾರೆ.

ಸೌಂದರ್ಯ ಸ್ಪರ್ಧೆ ವಿಜೇತೆ

ಮನ್ನಿಕಾ ವಿಶ್ವಕರ್ಮ ಅವರು ಇದೇ ಮೊದಲ ಬಾರಿ ಸಿನಿಮಾನಲ್ಲಿ ನಟಿಸುತ್ತಿದ್ದು, ಇದು ಅವರ ಮೊದಲ ಸಿನಿಮಾ ಆಗಿದೆ.

     ಮನ್ನಿಕಾ ವಿಶ್ವಕರ್ಮ