ಮತ್ತೆ ದಕ್ಷಿಣಕ್ಕೆ ಬಂದ ‘ಕೆಜಿಎಫ್’ ಚೆಲುವೆ, ಚಿರಂಜೀವಿ ಸಿನಿಮಾನಲ್ಲಿ ಅವಕಾಶ

02 July 2025

By  Manjunatha

ಮೌನಿ ರಾಯ್, ಹಿಂದಿ ಸಿನಿಮಾ ಮತ್ತು ಟಿವಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

       ನಟಿ ಮೌನಿ ರಾಯ್

‘ನಾಗಿನ್’ ಧಾರಾವಾಹಿ ಮೂಲಕ ದೊಡ್ಡ ಹೆಸರು ಗಳಿಸಿದ ಮೌನಿ ರಾಯ್, ದೊಡ್ಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

     ‘ನಾಗಿನ್’ ಧಾರಾವಾಹಿ

‘ಕೆಜಿಎಫ್’ ಸಿನಿಮಾನಲ್ಲಿಯೂ ಮೌನಿ ರಾಯ್ ನಟಿಸಿದ್ದರು. ‘ಗಲಿ-ಗಲಿ’ ಹಾಡಿಗೆ ಸ್ಟೆಪ್ ಹಾಕಿದ್ದರು ಚೆಲುವೆ.

       ‘ಕೆಜಿಎಫ್’ ಸಿನಿಮಾ

‘ಕೆಜಿಎಫ್’ ಬಳಿಕ ಮೌನಿ ರಾಯ್, ಯಾವುದೇ ದಕ್ಷಿಣ ಭಾರತ ಸಿನಿಮಾನಲ್ಲಿ ಕಾಣಿಸಿಕೊಂಡಿರಲಿಲ್ಲ.

   ದಕ್ಷಿಣ ಭಾರತ ಸಿನಿಮಾ

ಇದೀಗ ಮೌನಿ ರಾಯ್ ಏಳು ವರ್ಷಗಳ ಬಳಿಕ ಮತ್ತೆ ದಕ್ಷಿಣ ಭಾರತದ ಸಿನಿಮಾನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

     ಏಳು ವರ್ಷಗಳ ಬಳಿಕ

ಮೌನಿ ರಾಯ್ ಇದೀಗ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ‘ವಿಶ್ವಂಭರ’ ಸಿನಿಮಾದ ವಿಶೇಷ ಹಾಡಿನಲ್ಲಿ ನಟಿಸಲಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ

‘ವಿಶ್ವಂಭರ’ ಸಿನಿಮಾನಲ್ಲಿ ಐಟಂ ಹಾಡೊಂದು ಇದ್ದು, ಈ ಹಾಡಿಗೆ ಮೌನಿ ರಾಯ್, ಚಿರಂಜೀವಿ ಜೊತೆ ಹೆಜ್ಜೆ ಹಾಕಲಿದ್ದಾರೆ.

  ವಿಶ್ವಂಭರ’ ಸಿನಿಮಾನಲ್ಲಿ

ಮೌನಿ ರಾಯ್ ಪ್ರಸ್ತುತ ‘ಹೇ ಜವಾನಿ ತೊ ಇಷ್ಕ್ ಹೋನಾ ಹೈ’, ಮತ್ತು ‘ಸಲಾಕರ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

      ‘ಸಲಾಕರ್’ ಸಿನಿಮಾ