ಮತ್ತೆ ಮುನ್ನೆಲೆಗೆ ಬಂತು ಮೃಣಾಲ್-ಧನುಶ್ ಡೇಟಿಂಗ್ ಸುದ್ದಿ: ಕಾರಣವೇನು?

21 APRL 2026

By  Manjunatha

ಮೃಣಾಲ್ ಠಾಕೂರ್ ಬಲು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ. ತೆಲುಗು, ಹಿಂದಿ ಸಿನಿಮಾಗಳಲ್ಲಿ ಅವರು ಬ್ಯುಸಿ.

  ನಟಿ ಮೃಣಾಲ್ ಠಾಕೂರ್

ಇತ್ತೀಚೆಗಷ್ಟೆ ನಟಿ ಮೃಣಾಲ್ ಠಾಕೂರ್ ಕುರಿತು ಗಾಳಿ ಸುದ್ದಿ ತುಸು ಜೋರಾಗಿಯೇ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಮೃಣಾಲ್ ಬಗ್ಗೆ ಗಾಳಿ ಸುದ್ದಿ

ಮೃಣಾಲ್ ಠಾಕೂರ್ ಮತ್ತು ತಮಿಳಿನ ಸ್ಟಾರ್ ನಟ ಧನುಶ್ ಡೇಟಿಂಗ್​​ನಲ್ಲಿದ್ದು, ಮದುವೆ ಆಗಲಿದ್ದಾರೆ ಎನ್ನಲಾಗಿತ್ತು.

   ಧನುಶ್ ಜೊತೆ ಡೇಟಿಂಗ್

ಆದರೆ ಆ ಸುದ್ದಿಯನ್ನು ಸ್ವತಃ ನಟಿ ಮೃಣಾಲ್ ನಿರಾಕರಿಸಿದ್ದರು. ಆದರೆ ಈಗ ಮತ್ತೆ ಅದೇ ಸುದ್ದಿ ಮುನ್ನೆಲೆಗೆ ಬಂದಿದೆ.

    ಸುದ್ದಿ ನಿರಾಕರಿಸಿದ್ದರು

ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಧನುಶ್ ಮತ್ತು ಮೃಣಾಲ್ ಠಾಕೂರ್ ಅವರು ಒಟ್ಟಿಗೆ ಸಿನಿಮಾನಲ್ಲಿ ನಟಿಸಲಿದ್ದಾರೆ.

 ಧನುಶ್ ಮತ್ತು ಮೃಣಾಲ್

ಅದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಧನುಶ್ ಅವರೇ ಆ ಸಿನಿಮಾವನ್ನು ನಿರ್ದೇಶನ ಸಹ ಮಾಡಲಿದ್ದಾರೆ.

       ಧನುಶ್ ನಿರ್ದೇಶನ

ಮೃಣಾಲ್ ಅವರಿಗಾಗಿ ವಿಶೇಷವಾಗಿ ಮಹಿಳಾ ಪ್ರಧಾನ ಸಿನಿಮಾವನ್ನು ಧನುಶ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

 ಮಹಿಳಾ ಪ್ರಧಾನ ಸಿನಿಮಾ

ಇಬ್ಬರೂ ಪರಸ್ಪರ ಡೇಟಿಂಗ್​​ನಲ್ಲಿರುವ ಕಾರಣದಿಂದಲೇ ಈ ಇಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

     ಒಟ್ಟಿಗೆ ನಟಿಸುತ್ತಿದ್ದಾರೆ