ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾಕ್ಕೆ ನಾಯಕಿಯಾದ ಮೃಣಾಲ್ ಠಾಕೂರ್

23 Apr 2025

By  Manjunatha

ಮೃಣಾಲ್ ಠಾಕೂರ್ ಬಹುಭಾಷಾ ನಟಿ. ಮರಸುತ್ತುವ ಪಾತ್ರಗಳಿಂದ ದೂರವೇ ಇರುವ ಮೃಣಾಲ್ ಇದೇ ಕಾರಣಕ್ಕೆ ಯಶಸ್ಸು ಗಳಿಸುತ್ತಿದ್ದಾರೆ.

  ನಟಿ ಮೃಣಾಲ್ ಠಾಕೂರ್

‘ಸೀತಾ ರಾಮಂ’, ‘ಹಾಯ್ ನಾನ್ನ’ ಇನ್ನೂ ಕೆಲವು ಸುಂದರ ಕತೆಗಳುಳ್ಳ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ.

ಹಿಟ್ ತೆಲುಗು ಸಿನಿಮಾಗಳು

ಮೂಲತಃ ಮರಾಠಿ ನಟಿಯಾದರೂ ಸಹ ತೆಲುಗು ಪ್ರೇಕ್ಷಕರ ಅಚ್ಚು ಮೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದಾರೆ ಮೃಣಾಲ್.

      ಅಚ್ಚು ಮೆಚ್ಚಿನ ನಟಿ

ಇದೀಗ ಮೃಣಾಲ್ ಹಿಂದಿಯ ನಾಲ್ಕು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದಾರೆ. ಒಂದು ತೆಲುಗು ಸಿನಿಮಾ ಸಹ ಕೈಯಲ್ಲಿದೆ.

 ಹಲವು ಸಿನಿಮಾ ಕೈಯಲ್ಲಿ

ಇದರ ನಡುವೆ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ನಟನಿಗೆ ನಾಯಕಿಯೂ ಆಗುತ್ತಿದ್ದಾರೆ ನಟಿ ಮೃಣಾಲ್ ಠಾಕೂರ್.

 ಪ್ಯಾನ್ ಇಂಡಿಯಾ ಸ್ಟಾರ್

ಪ್ರಭಾಸ್ ನಟನೆಯ ಹೊಸ ಸಿನಿಮಾ ‘ಸ್ಪಿರಿಟ್’ಗೆ ಮೃಣಾಲ್ ಠಾಕೂರ್ ನಾಯಕಿ ಆಗಲಿದ್ದಾರೆ ಎನ್ನಲಾಗುತ್ತಿದೆ.

  ಹೊಸ ಸಿನಿಮಾ ‘ಸ್ಪಿರಿಟ್’

ರಶ್ಮಿಕಾ ಮಂದಣ್ಣಗೆ ಮೊದಲು ಅವಕಾಶ ನೀಡಲಾಗಿತ್ತಂತೆ ಆದರೆ ಡೇಟ್ಸ್ ಇನ್ನಿತರೆ ಕಾರಣಗಳಿಂದಾಗಿ ಈಗ ಮೃಣಾಲ್ ಠಾಕೂರ್ ಆಯ್ಕೆ ಆಗಿದ್ದಾರೆ.

ಮೃಣಾಲ್ ಠಾಕೂರ್ ಆಯ್ಕೆ

ಮೃಣಾಲ್ ಠಾಕೂರ್ ಪ್ರಸ್ತುತ ‘ಡಕೋಯ್ಟ್’ ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅಡವಿಶೇಷ್ ಈ ಸಿನಿಮಾದ ನಾಯಕ.

ಈಗ ಕೈಯಲ್ಲಿರುವ ಸಿನಿಮಾ