ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿದ ನಟಿ ನಭಾ ನಟೇಶ್

06 OCT 2026

By  Manjunatha

ಕನ್ನಡದ ನಟಿ ನಭಾ ನಟೇಶ್, ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಕನ್ನಡದ ಸಿನಿಮಾ ಮೂಲಕ ಆದರೆ ಮಿಂಚಿದ್ದು ಪರಭಾಷೆಗಳಲ್ಲಿ.

       ನಟಿ ನಭಾ ನಟೇಶ್

ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿರುವ ನಟಿ ನಭಾ, ಇದೀಗ ಹಲವು ವರ್ಷದ ಬಳಿಕ ಸ್ಯಾಂಡಲ್​​ವುಡ್​​ಗೆ ಮರಳಿದ್ದಾರೆ.

    ಕನ್ನಡಕ್ಕೆ ಮರಳಿದ್ದಾರೆ

2017 ರಲ್ಲಿ ಬಿಡುಗಡೆ ಆದ ಸಿನಿಮಾ ‘ಸಾಹೇಬ’ ನಭಾ ನಟಿಸಿದ್ದ ಕೊನೆಯ ಕನ್ನಡ ಸಿನಿಮಾ ಆಗಿತ್ತು.

 2017 ರಲ್ಲಿ ಕೊನೆ ಸಿನಿಮಾ

ಇದೀಗ ಒಂಬತ್ತು ವರ್ಷಗಳ ಬಳಿಕ ನಭಾ ನಟೇಶ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

       ಕನ್ನಡ ಚಿತ್ರರಂಗಕ್ಕೆ

ಧ್ರುವ ಸರ್ಜಾ ನಟಿಸುತ್ತಿರುವ ಹೊಸ ಸಿನಿಮಾ ‘ಕೆಮಿಸ್ಟ್ರಿ’ನಲ್ಲಿ ನಭಾ ನಟೇಶ್ ನಾಯಕಿ ಆಗಿದ್ದಾರೆ.

     ‘ಕೆಮಿಸ್ಟ್ರಿ’ನಲ್ಲಿ ನಭಾ

‘ಕೆಮಿಸ್ಟ್ರಿ’ ಸಿನಿಮಾ ಇಂದಷ್ಟೆ (ಅಕ್ಟೋಬರ್ 6) ಘೋಷಣೆ ಆಗಿದ್ದು, ಚಿತ್ರೀಕರಣ ಶುರುವಾಗ ಬೇಕಿದೆ.

      ಚಿತ್ರೀಕರಣ ಶುರು

ನಭಾ ನಟೇಶ್ 2017ರ ಬಳಿಕ ನೆರೆಯ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿ ಆಗಿದ್ದರು.

    ತೆಲುಗು ಚಿತ್ರರಂಗದಲ್ಲಿ

ತೆಲುಗಿನಲ್ಲಿ ಅವರು ಹಲವು ಸಿನಿಮಾಗಳಲ್ಲಿ, ದೊಡ್ಡ ಸ್ಟಾರ್ ನಟರುಗಳೊಟ್ಟಿಗೆ ನಟನೆ ಮಾಡಿದ್ದಾರೆ.

      ದೊಡ್ಡ ಸ್ಟಾರ್ ನಟ