ನಟಿ ನಿಹಾರಿಕಾ ಎರಡನೇ ಮದುವೆ ಬಗ್ಗೆ ತಂದೆ ನಾಗಬಾಬು ಹೇಳಿದ್ದೇನು?

24 June 2025

By  Manjunatha

ನಿಹಾರಿಕಾ ಕೋನಿಡೆಲ, ಮೆಗಾಸ್ಟಾರ್ ಕುಟುಂಬದ ಕುಡಿ. ನಟನೆ ಮತ್ತು ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

     ನಿಹಾರಿಕಾ ಕೋನಿಡೆಲ

ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲ. ಈಗ ಸಿಂಗಲ್.

      ಚಿರಂಜೀವಿ, ಪವನ್ 

ಕೆಲ ವರ್ಷಗಳ ಹಿಂದೆ ಬಲು ಅದ್ಧೂರಿಯಾಗಿ ಉದ್ಯಮಿಯೊಟ್ಟಿಗೆ ನಿಹಾರಿಕಾ ಮದುವೆ ಆಗಿತ್ತು. ಆದರೆ ವಿಚ್ಛೇದನ ಪಡೆದು ದೂರಾದರು.

ಉದ್ಯಮಿಯೊಟ್ಟಿಗೆ ಮದುವೆ

ಇದೀಗ ನಟ ನಾಗಬಾಬು ತಮ್ಮ ಪುತ್ರಿಯ ಮದುವೆ ಬಗ್ಗೆ ಮಾತನಾಡಿದ್ದು, ನನ್ನ ತಪ್ಪಿನಿಂದಲೇ ಹೀಗಾಯ್ತು ಎಂದಿದ್ದಾರೆ.

 ತಪ್ಪಿನಿಂದಲೇ ಹೀಗಾಯ್ತು

ಮಗಳ ಮದುವೆ ವಿಷಯದಲ್ಲಿ ನಾನು ಎಡವಿದೆ. ಸರಿಯಾದ ವರವನ್ನು ಹುಡುಕಬೇಕಿತ್ತು, ಮದುವೆ ಬಳಿಕ ಇಬ್ಬರಿಗೂ ಸರಿ ಬರಲಿಲ್ಲ ಎಂದಿದ್ದಾರೆ.

      ಸರಿಯಾದ ವರ ಅಲ್ಲ

ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರಾಗಿದ್ದಾರೆ. ನಾನು ಮಗಳ ಖಾಸಗಿ ಬದುಕಿನಲ್ಲಿ ಮೂಗು ತೂರಿಸುವುದಿಲ್ಲ ಎಂದಿದ್ದಾರೆ.

     ಒಪ್ಪಿಗೆಯಿಂದ ದೂರ

ನಿಹಾರಿಕಾ ಖಂಡಿತ ಒಳ್ಳೆಯ ವರನನ್ನು ಹುಡುಕಿ ಮತ್ತೊಮ್ಮೆ ಮದುವೆ ಆಗುತ್ತಾಳೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

  ಮತ್ತೆ ಮದುವೆ ಆಗುತ್ತಾಳೆ

ನಿಹಾರಿಕಾ ಕೊನಿಡೆಲ ಹೆಸರು ನಟ ಸಿದ್ದು ಜೊನ್ನಲಗಡ್ಡ ಜೊತೆಗೆ ತುಸು ಗಟ್ಟಿಯಾಗಿ ಕೇಳಿ ಬರುತ್ತಿದೆ.

      ಸಿದ್ದು ಜೊನ್ನಲಗಡ್ಡ