ನಮ್ರತಾ ಗೌಡಗೆ ಆನ್​ಲೈನ್​​ನಲ್ಲಿ ಕಿರುಕುಳ, ದಿಟ್ಟವಾಗಿ ಎದುರಿಸಿದ ನಟಿ

14 May 2025

By  Manjunatha

ನಟಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ, ಲೈಂಗಿಕ ದೌರ್ಜನ್ಯ ಸಾಮಾನ್ಯ ಎಂಬಂತಾಗಿಬಿಟ್ಟಿದೆ.

    ಸಾಮಾಜಿಕ ಜಾಲತಾಣ   

ಇದೀಗ ನಟಿ, ಮಾಜಿ ಬಿಗ್​ಬಾಸ್ ಸ್ಪರ್ಧಿ ನಮ್ರತಾ ಗೌಡ ಅವರಿಗೆ ಆನ್​ಲೈನ್​​ನಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ.

        ನಟಿ ನಮ್ರತಾ ಗೌಡ

ನಮ್ರತಾ ಗೌಡ ಅವರ ಇನ್​ಸ್ಟಾಗ್ರಾಂ ಖಾತೆಗೆ ಮೆಸೇಜ್ ಮಾಡಿರು ರೋಷನ್ ಎಂಬ ವ್ಯಕ್ತಿ ರಾಜಕಾರಣಿಗಳೊಟ್ಟಿಗೆ ‘ಡೇಟಿಂಗ್’ಗೆ ಕರೆದಿದ್ದಾನೆ.

    ರೋಷನ್ ಎಂಬ ವ್ಯಕ್ತಿ

ನೀವು ಕೇಳಿದಷ್ಟು ಹಣ ಕೊಡುತ್ತೇನೆ, ರಾಜಕಾರಣಿಗಳು, ವಿಐಪಿಗಳ ಜೊತೆಗೆ ಡೇಟಿಂಗ್​ಗೆ ಬನ್ನಿ ಎಂದು ಕರೆದಿದ್ದಾನೆ.

      ಡೇಟಿಂಗ್​ಗೆ ಆಹ್ವಾನ

ಮೊದಲಿಗೆ ನಮ್ರತಾ ಗೌಡ ಈ ಸಂದೇಶವನ್ನು ನಿರ್ಲಕ್ಷಿಸಿದ್ದಾರೆ. ಆತ ಪದೇ ಪದೇ ಅದೇ ಸಂದೇಶಗಳನ್ನು ಕಳಿಸಿದ್ದಾನೆ.

ಪದೇ ಪದೇ ಅದೇ ಸಂದೇಶ

ಕೊನೆಗೆ ನಟಿ ನಮ್ರತಾ ಗೌಡ ಆತನ ಸಂದೇಶದ ಸ್ಕ್ರೀನ್​ಶಾಟ್​ಗಳನ್ನು ಬಹಿರಂಗಗೊಳಿಸಿದ್ದಲ್ಲದೆ, ಸಾಕು ನಿಲ್ಲಿಸು ಎಂದಿದ್ದಾರೆ.

   ತಕ್ಕ ಪಾಠ ಕಲಿಸಿದ ನಟಿ

ರೋಷನ್ ಎಂಬ ವ್ಯಕ್ತಿ ನಮ್ರತಾಗೆ ಮೆಸೇಜ್ ಮಾಡಿದ್ದು, ಆತನ ಪ್ರೊಫೈಲ್​​ನಲ್ಲಿ ಪ್ರತಾಪ್ ಸಿಂಹ ಜೊತೆ ತೆಗೆಸಿಕೊಂಡಿರುವ ಚಿತ್ರವಿದೆ.

  ರೋಷನ್ ಹೆಸರಿನ ವ್ಯಕ್ತಿ

ನಮ್ರತಾ ಗೌಡ ದಿಟ್ಟವಾಗಿ ಆನ್​ಲೈನ್ ಕಿರುಕುಳವನ್ನು ಎದುರಿಸಿದ್ದು, ಕಿರುಕುಳ ನೀಡಿದ ವ್ಯಕ್ತಿಗೆ ದಿಟ್ಟ ಉತ್ತರ ನೀಡಿದ್ದಾರೆ.

   ದಿಟ್ಟ ಉತ್ತರ ನೀಡಿದ್ದಾರೆ