‘ಕೆಡಿ’ ಹಾಡು ವಿವಾದ: ನೋರಾ ಫತೇಹಿಗೆ ಹೆಚ್ಚಾಯ್ತು ಸಂಕಷ್ಟ

07 APRL 2026

By  Manjunatha

ಕನ್ನಡದ ‘ಕೆಡಿ’ ಸಿನಿಮಾದ ಐಟಂ ಹಾಡಿನಲ್ಲಿ ಡ್ಯಾನ್ಸ್ ಮಾಡಿರುವುದು ನಟಿ ನೋರಾ ಫತೇಹಿಗೆ ಸಂಕಷ್ಟ ತಂದಿದೆ.

ನೋರಾ ಫತೇಹಿಗೆ ಸಂಕಷ್ಟ

ಪ್ರೇಮ್ ನಿರ್ದೇಶಿಸಿ, ತಾವೇ ಬರೆದಿರುವ ‘ಸೆರಗು ಸರಿಸಿ’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಇದು ವಿವಾದ ಸೃಷ್ಟಿಸಿದೆ.

ಪ್ರೇಮ್ ಬರೆದಿದ್ದ ಹಾಡದು

ಹಾಡು ಬಹಳ ಅಶ್ಲೀಲವಾಗಿದೆ. ಹಾಡಿನ ಚಿತ್ರೀಕರಣವೂ ಅಶ್ಲೀಲವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿದೆ.

ರಾಷ್ಟ್ರ ಮಹಿಳಾ ಆಯೋಗ

ನೋರಾ ಫತೇಹಿ, ಸಂಜಯ್ ದತ್, ಪ್ರೇಮ್, ನಿರ್ಮಾಪಕ ಕೆವಿಎನ್ ವೆಂಕಟ್ ಇನ್ನೂ ಕೆಲವರಿಗೆ ಮಹಿಳಾ ಆಯೋಗ ನೊಟೀಸ್ ನೀಡಿತ್ತು.

      ಮಹಿಳಾ ಆಯೋಗ

ನೋರಾ ಫತೇಹಿ ಪರ ಅವರ ವಕೀಲರು ವಿಚಾರಣೆಗೆ ಹಾಜರಾಗಿದ್ದರು, ಆದರೆ ಇದನ್ನು ಮಹಿಳಾ ಆಯೋಗ ಒಪ್ಪಿಲ್ಲ.

    ವಿಚಾರಣೆಗೆ ನಟಿ ಗೈರು

ಇದೀಗ ನೋರಾ ಫತೇಹಿಗೆ ಮತ್ತೊಮ್ಮೆ ಮಹಿಳಾ ಆಯೋಗವು ನೊಟೀಸ್ ಜಾರಿ ಮಾಡಿದ್ದು, ಖುದ್ದು ಹಾಜರಾಗುವಂತೆ ಸೂಚಿಸಿದೆ. 

   ಖುದ್ದು ಹಾಜರಾಗಬೇಕು

ನೋರಾ ಫತೇಹಿ ಅವರು ಏಪ್ರಿಲ್ 27ಕ್ಕೆ ಖುದ್ದಾಗಿ ಮಹಿಳಾ ಆಯೋಗದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕಿದೆ.

ವಿಚಾರಣೆ ಎದುರಿಸಬೇಕಿದೆ

ನೋರಾ ಫತೇಹಿ ಸ್ಟೇಜ್ ಶೋ, ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಅವರು ಏಪ್ರಿಲ್ 27ಕ್ಕೆ ವಿಚಾರಣೆಗೆ ಹಾಜರಾಗುತ್ತಾ ನೋಡಬೇಕಿದೆ.

ಬ್ಯುಸಿಯಾಗಿದ್ದಾರೆ ನೋರಾ