ಚಿರಂಜೀವಿಗಾಗಿ ನಿಯಮ ಮುರಿದ ನಟಿ ನಯನತಾರಾ

16 May 2025

By  Manjunatha

ನಯನತಾರಾ ಬಹಳ ಶಿಸ್ತಿನ ನಟಿ, ಚಿತ್ರೀಕರಣದ ಸಮಯದಲ್ಲಿ ಏನೇನೋ ನಿಯಮ ಇಡುತ್ತಾರೆ ಎಂಬ ಮಾತಿದೆ.

       ನಟಿ ನಯನತಾರಾ

ನಯನತಾರಾ ಇತರೆ ನಟಿಯರ ರೀತಿ ಪ್ರಚಾರಕ್ಕೆ ಬರುವುದಿಲ್ಲ, ಬಂದರೂ ಒಂದು ಅಥವಾ ಎರಡು ದಿನ ಮಾತ್ರ.

   ಪ್ರಚಾರಕ್ಕೆ ಬರುವುದಿಲ್ಲ

ಆದರೆ ಮೆಗಾಸ್ಟಾರ್ ಚಿರಂಜೀವಿ ಅವರಿಗಾಗಿ ಈ ನಿಯಮ ಮುರಿದಿರುವ ನಯನತಾರಾ, ಮೊದಲ ದಿನದಿಂದಲೇ ಪ್ರಚಾರ ಪ್ರಾರಂಭಿಸಿದ್ದಾರೆ.

   ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ನಟನೆಯ 157ನೇ ಸಿನಿಮಾನಲ್ಲಿ ನಯನತಾರಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

   ನಯನತಾರಾ ನಾಯಕಿ

ಬೇರೆ ಸಿನಿಮಾಗಳಿಗೆ ಪ್ರಚಾರಕ್ಕೆ ಬಾರದ ನಯನತಾರಾ, ಈ ಸಿನಿಮಾಕ್ಕೆ ಮೊದಲ ದಿನವೇ ಪ್ರಚಾರದ ವಿಡಿಯೋ ಮಾಡಿಕೊಟ್ಟಿದ್ದಾರೆ.

      ಪ್ರಚಾರದ ವಿಡಿಯೋ

ಚಿರಂಜೀವಿ ರೀತಿಯೇ ಸ್ಟೈಲ್ ಆಗಿ ಫೋಸು ಕೊಟ್ಟು ವಿಡಿಯೋ ಮಾಡಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆಗ್ತಿದೆ ವಿಡಿಯೋ

ಅಂದಹಾಗೆ ಚಿರಂಜೀವಿ ಜೊತೆಗೆ ನಯನತಾರಾ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಅನಿಲ್ ರವಿಪುಡಿ ಸಿನಿಮಾದ ನಿರ್ದೇಶಕ.

  ಮೂರನೇ ಸಿನಿಮಾ ಇದು

ಮೆಗಾಸ್ಟಾರ್ ಚಿರಂಜೀವಿ ಸಹ ನಯನತಾರಾ ಅವರನ್ನು ಖುಷಿಯಿಂದ ಸ್ವಾಗತಿಸಿದ್ದು, ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ಮುಂದಿನ ವರ್ಷ ಬಿಡುಗಡೆ