ನಂದಮೂರಿ ಬಾಲಕೃಷ್ಣ ಸಿನಿಮಾದಿಂದ ಹೊರನಡೆದ ನಯನತಾರಾ: ಕಾರಣ?

22 APRL 2026

By  Manjunatha

ನಯನತಾರಾ ದಕ್ಷಿಣ ಭಾರತದ ಸ್ಟಾರ್ ನಟಿ, ನಯನತಾರಾ ಅನ್ನು ಲೇಡಿ ಸೂಪರ್ ಸ್ಟಾರ್ ಎಂದೂ ಕರೆಯುತ್ತಾರೆ.

    ದಕ್ಷಿಣ ಭಾರತದ ನಟಿ

ಕನ್ನಡ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಗಳಲ್ಲಿ ನಟಿಸಿರುವ ನಯನತಾರಾ, ಇತ್ತೀಚೆಗೆ ಹಿಂದಿಯಲ್ಲೂ ನಟಿಸಿದ್ದಾರೆ.

ಹಿಂದಿಯಲ್ಲೂ ನಟಿಸಿದ್ದಾರೆ

ಎರಡು ದಶಕಗಳಿಂದಲೂ ಸ್ಟಾರ್ ನಟಿಯಾಗಿ ನಟಿಸಿರುವ ನಯನತಾರಾ ಈಗಲೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.

 ಎರಡು ದಶಕಗಳಿಂದಲೂ

ಒಂದರ ಹಿಂದೊಂದು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಆದರೆ ಇದೀಗ ಅವರು ಸ್ಟಾರ್ ನಟನ ಸಿನಿಮಾದಿಂದ ಹೊರನಡೆದಿದ್ದಾರೆ.

ಒಂದರ ಹಿಂದೊಂದು ಚಿತ್ರ

ನಂದಮೂರಿ ಬಾಲಕೃಷ್ಣ ನಟಿಸಲಿರುವ ಹೊಸ ಸಿನಿಮಾಕ್ಕೆ ನಯನತಾರಾ ನಾಯಕಿಯಾಗಿ ಆಯ್ಕೆ ಆಗಿದ್ದರು.

  ನಂದಮೂರಿ ಬಾಲಕೃಷ್ಣ

ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡಲಿದ್ದ ಈ ಸಿನಿಮಾದಿಂದ ಹಠಾತ್ತನೇ ನಯನತಾರಾ ಹೊರನಡೆದಿದ್ದಾರೆ.

  ಗೋಪಿಚಂದ್ ಮಲಿನೇನಿ

ಸಿನಿಮಾದ ಚಿತ್ರೀಕರಣ ತಡವಾಗಿ, ನಯನತಾರಾ ಅವರ ಮತ್ತೊಂದು ಸಿನಿಮಾಕ್ಕೆ ಸಮಸ್ಯೆ ಆದ ಕಾರಣ ಸಿನಿಮಾದಿಂದ ಹೊರನಡೆದಿದ್ದಾರೆ ನಟಿ.

      ಸಿನಿಮಾಕ್ಕೆ ಸಮಸ್ಯೆ

ಇದೀಗ ನಯನತಾರಾ ಸಲ್ಮಾನ್ ಖಾನ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ತಮಿಳಿನ ಕೆಲ ಸಿನಿಮಾಗಳೂ ಕೈಯಲ್ಲಿವೆ.

    ಸಲ್ಮಾನ್ ಖಾನ್ ಜೊತೆ