ಸ್ಟಾರ್ ನಟನ ಸಿನಿಮಾ ಮೂಲಕ ಮರಳಿ ಬರುತ್ತಿದ್ದಾರೆ ಕ್ಯೂಟ್ ನಟಿ ನಾಜರಿಯಾ

20 NOV 2025

By  Manjunatha

ನಾಜರಿಯಾ ಫಹಾದ್, ದಕ್ಷಿಣ ಭಾರತದ ಖ್ಯಾತ ನಟಿ. ಹಲವು ಒಳ್ಳೆಯ ಸಿನಿಮಾಗಳಲ್ಲಿ ನಾಜರಿಯಾ ನಟಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ

ಖ್ಯಾತ ನಟ ಫಹಾದ್ ಫಾಸಿಲ್ ಪತ್ನಿಯೂ ಆಗಿರುವ ನಾಜರಿಯಾ ನಜೀಮ್ ಅದ್ಭುತವಾದ ನಟಿಯೂ ಸಹ ಹೌದು.

 ನಟಿ ನಾಜರಿಯಾ ನಜೀಮ್

ಆದರೆ ಕಳೆದ ಒಂದು ವರ್ಷದಿಂದ ನಾಜರಿಯಾ ನಜೀಂ ಅವರು ಯಾವುದೇ ಹೊಸ ಸಿನಿಮಾನಲ್ಲಿ ನಟಿಸಿರಲಿಲ್ಲ.

 ಸಿನಿಮಾನಲ್ಲಿ ನಟಿಸಿರಲಿಲ್ಲ

‘ಸೂಕ್ಷ್ಮದರ್ಶಿನಿ’ ನಾಜರಿಯಾ ನಟಿಸಿದ ಕೊನೆಯ ಸಿನಿಮಾ ಆಗಿತ್ತು. ಅದಾದ ಬಳಿಕ ಯಾವ ಸಿನಿಮಾನಲ್ಲೂ ನಟಿಸಿಲ್ಲ ನಾಜರಿಯಾ.

   ‘ಸೂಕ್ಷ್ಮದರ್ಶಿನಿ’ ಸಿನಿಮಾ

ಈಗ ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆಯ ಮೇಲೆ ಬರಲು ನಾಜರಿಯಾ ಸಜ್ಜಾಗಿದ್ದಾರೆ.

     ತಮಿಳಿನ ಸ್ಟಾರ್ ನಟ

ತಮಿಳಿನ ಸ್ಟಾರ್ ನಟ ಸೂರ್ಯ ಅವರು ನಟಿಸುತ್ತಿರುವ ಮುಂದಿನ ಸಿನಿಮಾನಲ್ಲಿ ನಾಜರಿಯಾ ನಾಯಕಿಯಾಗಿ ನಟಿಸಲಿದ್ದಾರೆ.

      ನಾಜರಿಯಾ ನಾಯಕಿ

ನಾಜರಿಯಾ ಪತಿ ಫಹಾದ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಆವೇಶಂ’ ನಿರ್ದೇಶಿಸಿದ್ದ ಜೀತು ಮಾಧವನ್ ಅವರೇ ಈ ಸಿನಿಮಾ ನಿರ್ದೇಶಿಸಲಿದ್ದಾರೆ.

      ಆವೇಶಂ ನಿರ್ದೇಶಕ

ನಾಜರಿಯಾ ಫಹಾದ್ ಈ ಹಿಂದೆ ತಮಿಳಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದು ಅವರಿಗೆ ಅಲ್ಲಿ ದೊಡ್ಡ ಅಭಿಮಾನಿಗಳಿದ್ದಾರೆ.

 ಸಾಕಷ್ಟು ಅಭಿಮಾನಿಗಳು