ವಿವಾದದಲ್ಲಿ ನಿಧಿ ಅಗರ್ವಾಲ್, ನಾನು ತಪ್ಪು ಮಾಡಿಲ್ಲ ಎಂದ ನಟಿ

12 AUG 2025

By  Manjunatha

ನಿಧಿ ಅಗರ್ವಾಲ್ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು.

     ನಟಿ ನಿಧಿ ಅಗರ್ವಾಲ್

ಹಿಂದಿ ಸಿನಿಮಾ ಮೂಲಕ ನಟನೆ ಪ್ರವೇಶಿಸಿದರೂ ಹೆಚ್ಚು ನಟಿಸಿರುವುದು ದಕ್ಷಿಣದ ಸಿನಿಮಾಗಳಲ್ಲಿಯೇ.

 ಹಿಂದಿ ಸಿನಿಮಾ ಮೂಲಕ

ಇತ್ತೀಚೆಗೆ ಬಿಡುಗಡೆ ಆದ ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ನಿಧಿ ಅಗರ್ವಾಲ್ ನಾಯಕಿ.

    ಹರಿ ಹರ ವೀರ ಮಲ್ಲು

ಆದರೆ ನಿಧಿ ಅಗರ್ವಾಲ್ ಇದೀಗ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಆಗಿದ್ದಾರೆ.

  ವಿವಾದದಲ್ಲಿ ನಟಿ ನಿಧಿ 

ನಿಧಿ ಅಗರ್ವಾಲ್ ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರು, ಆದರೆ ಅವರು ಬಂದ ವಾಹನ ಸರ್ಕಾರಿ ವಾಹನ.

 ಖಾಸಗಿ ಕಾರ್ಯಕ್ರಮದಲ್ಲಿ

ನಿಧಿ ಅಗರ್ವಾಲ್ ಖಾಸಗಿ ಕಾರ್ಯಕ್ರಮಕ್ಕೆ ಆಂಧ್ರ ಸರ್ಕಾರದ ವಾಹನ ಬಳಸಿದ್ದಾರೆಂದು ಸುದ್ದಿಯಾಯ್ತು.

   ಸರ್ಕಾರಿ ವಾಹನ ಬಳಕೆ

ಇದೀಗ ಸ್ಪಷ್ಟನೆ ನೀಡಿರುವ ನಿಧಿ ಅಗರ್ವಾಲ್, ಆ ವಾಹನ ನನ್ನದಲ್ಲ, ಆಯೋಜಕರು ನೀಡಿದ ವಾಹನ ಎಂದಿದ್ದಾರೆ. 

 ನಿಧಿ ಅಗರ್ವಾಲ್ ಸ್ಪಷ್ಟನೆ

ನನಗೆ ಆ ವಾಹನ ಕೊಡಿ ಎಂದು ನಾನು ಕೇಳಿಲ್ಲ, ಆಯೋಜಕರು ಕೊಟ್ಟ ವಾಹನದಲ್ಲಿ ನಾನು ಬಂದೆ ಎಂದಿದ್ದಾರೆ.

ತಪ್ಪು ನನದಲ್ಲ ಎಂದ ನಟಿ