ಬಾಲಿಯಲ್ಲಿ ಅಪಘಾತಕ್ಕೀಡಾದ ನಟಿ ನುಸ್ರತ್ ಬರೂಚಾ

02 OCT 2026

By  Manjunatha

ನುಸ್ರತ್ ಬರೂಚಾ ಬಾಲಿವುಡ್​​ನ ಖ್ಯಾತ ನಟಿ, ದಶಕಗಳಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

  ಬಾಲಿವುಡ್​​ನ ಖ್ಯಾತ ನಟಿ

ಆದರೆ ಇದೀಗ ಬಾಲಿಗೆ ಶೂಟಿಂಗ್​​ಗಾಗಿ ತೆರಳಿದ್ದಾಗ ಅವರು ಅಪಘಾತಕ್ಕೆ ಈಡಾಗಿದ್ದು, ತುಸು ಗಂಭೀರ ಸ್ಥಿತಿಯಲ್ಲಿದ್ದಾರೆ.

ಶೂಟಿಂಗ್​​ಗಾಗಿ ತೆರಳಿದ್ದಾಗ

ಇಂಡೋನೇಷ್ಯಾದ ಬಾಲಿಗೆ ಶೂಟಿಂಗ್​​ ಒಂದಕ್ಕಾಗಿ ನಟಿ ನುಸ್ರತ್ ಬರೂಚಾ ತೆರಳಿದ್ದರು. ಈ ವೇಳೆ ಅವಘಡ ನಡೆದಿದೆ.

        ಅವಘಡ ನಡೆದಿದೆ

ನುಸ್ರತ್ ಬರೂಚಾ ಅವರನ್ನು ಬಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

  ಐಸಿಯುನಲ್ಲಿಟ್ಟು ಚಿಕಿತ್ಸೆ

ನುಸ್ರತ್ ಬರೂಚಾ ಅವರ ಬೆನ್ನಿನ ಮೂಳೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗುತ್ತಿದ್ದು, ಅವರಿ ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿದೆ.

   ಬೆನ್ನಿನ ಮೂಳೆಗೆ ಪೆಟ್ಟು

ಇದೇ ಕಾರಣಕ್ಕೆ ನಟಿ ನುಸ್ರತ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ.

ಏರ್ ಆಂಬುಲೆನ್ಸ್ ಮೂಲಕ

ನುಸ್ರತ್ ಬರೂಚಾ ಅವರು ದಕ್ಷಿಣದ ಕೆಲ ಸಿನಿಮಾಗಳು ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

     ಹಿಂದಿ ಸಿನಿಮಾಗಳಲ್ಲಿ

ನುಸ್ರತ್ ಅವರ ಆಪ್ತರು, ಅಭಿಮಾನಿಗಳು ನಟಿ ಬೇಗ ಗುಣಮುಖ ಆಗಲೆಂದು ಹಾರೈಸುತ್ತಿದ್ದಾರೆ.

         ಹಾರೈಸುತ್ತಿದ್ದಾರೆ