ಚಿತ್ರರಂಗಕ್ಕೆ ಕಾಲಿಡಲಿರುವ ಲಂಕೇಶ್ ಮೊಮ್ಮಗಳು ಇಶಾ ಲಂಕೇಶ್: ಚಿತ್ರಗಳ ನೋಡಿ

10 July 2026

By  Manjunatha

ಸ್ವತಃ ಸಿನಿಮಾ ನಿರ್ದೇಶೀಸಿದ್ದ ಪಿ ಲಂಕೇಶ್ ಅವರ ಇಬ್ಬರು ಮಕ್ಕಳು ಹಾಗೂ ಒಬ್ಬ ಮೊಮ್ಮಗ ಈಗಾಗಲೇ ಚಿತ್ರರಂಗದಲ್ಲಿದ್ದಾರೆ.

    ಪಿ ಲಂಕೇಶ್ ಕುಟುಂಬ

ಇದೀಗ ಪಿ ಲಂಕೇಶ್ ಅವರ ಇನ್ನೊಬ್ಬ ಮೊಮ್ಮಗಳು ಸಹ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

   ಇನ್ನೊಬ್ಬ ಮೊಮ್ಮಗಳು

ನಿರ್ದೇಶಕಿ ಕವಿತಾ ಲಂಕೇಶ್ ಅವರ ಪುತ್ರಿ ಇಶಾ ಲಂಕೇಶ್ ಅವರು ಕನ್ನಡ ಸಿನಿಮಾನಲ್ಲಿ ನಟಿಸಲಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್

ಇಶಾ ಲಂಕೇಶ್ ಅವರು ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

  ಪ್ರೀತಂ ಗುಬ್ಬಿ ನಿರ್ದೇಶನ

ಇಶಾ ಲಂಕೇಶ್ ಅವರಿಗೆ ತಾಯಿ, ನಿರ್ದೇಶಕಿ ಕವಿತಾ ಲಂಕೇಶ್ ಅವರು ಬೆನ್ನೆಲುಬಾಗಿದ್ದು, ಮಾರ್ಗದರ್ಶನ ನೀಡುತ್ತಿದ್ದಾರೆ.

    ತಾಯಿಯೇ ಬೆನ್ನೆಲುಬು

ದೆಹಲಿಯಲ್ಲಿ ಇಂಗ್ಲೀಷ್ ಸಾಹಿತ್ಯದಲಿ ಪದವಿ ಗಳಿಸಿರುವ ಇಶಾ, ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ.

ರಂಗಭೂಮಿಯಲ್ಲೂ ಕೆಲಸ

ಬ್ರಿಟನ್​​ನಲ್ಲಿ ನಟನೆಯ ಮಟ್ಟುಗಳನ್ನು, ಪಟ್ಟುಗಳನ್ನು ಸಹ ಇಶಾ ಲಂಕೇಶ್ ಕಲಿತು ಬಂದಿದ್ದಾರೆ.

  ಕಲಿತು ಬಂದಿರುವ ಇಶಾ

ಪ್ರಕಾಶ್ ರೈ ಅವರ ನಿರ್ದಿಗಂತ ತಂಡದೊಟ್ಟಿಗೆ ಸೇರಿಕೊಂಡ ನಾಟಕಗಳಲ್ಲಿ ನಟಿಸಿದ್ದಾರೆ.

     ನಾಟಕಗಳಲ್ಲಿ ನಟನೆ