ಬಾಲಿವುಡ್ ನಟಿ ಪರಿಣೀತಿ ಚೋಪ್ರಾ-ರಾಘವ್ ಚಡ್ಡಾ ದಂಪತಿಗೆ ಮಗು

19 OCT 2025

By  Manjunatha

ಬಾಲಿವುಡ್​ನ ಜನಪ್ರಿಯ ನಟಿ ಪರಿಣೀತಿ ಚೋಪ್ರಾ ಹಾಗೂ ರಾಜಕಾರಣಿ ರಾಘವ್ ಚಡ್ಡಾ ದಂಪತಿಗೆ ಗಂಡು ಮಗುವಾಗಿದೆ. 

       ಪರಿಣೀತಿ ಚೋಪ್ರಾ

ಪರಿಣೀತಿ ಚೋಪ್ರಾ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಗಂಡು ಮಗುವಿಗೆ ಜನ್ಮ

ಪರಿಣೀತಿ ಚೋಪ್ರಾ ಮತ್ತು ರಾಘವ್ ಅವರು 2023ರಲ್ಲಿ ವಿವಾಹವಾದರು. ಬಲು ಅದ್ಧೂರಿಯಾಗಿ ಮದುವೆ ನಡೆದಿತ್ತು.

  ಅದ್ಧೂರಿಯಾಗಿ ಮದುವೆ

ರಾಘವ್ ಚಡ್ಡ ಹಾಗೂ ಪರಿಣೀತಿ ಚೋಪ್ರಾ ಅವರುಗಳು ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾದರು.

 ಕುಟುಂಬದ ಒಪ್ಪಿಗೆ ಪಡೆದು

ಮಗು ಜನಿಸಿರುವ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟಿ, ‘ಈಗ ನಮ್ಮ ಬಳಿ ಎಲ್ಲವೂ ಇದೆ’ ಎಂದಿದ್ದಾರೆ.

     ಇನ್​​ಸ್ಟಾಗ್ರಾಂ ಪೋಸ್ಟ್

ಈ ಹಿಂದೆ ಏನು ನಡೆದಿತ್ತು ಎಂಬುದು ಸಹ ನಮಗೆ ಮರೆತು ಹೋಗುವಷ್ಟು ನಾವು ಖುಷಿಯಾಗಿದ್ದೇವೆ ಎಂದಿದ್ದಾರೆ ನಟಿ.

  ಬಹಳ ಖುಷಿಯಾಗಿದ್ದೇವೆ

ಮೊದಲು ಒಬ್ಬರಿಗೆ ಒಬ್ಬರು ಇದ್ದೆವು, ಈಗ ನಮ್ಮ ಬಳಿ ಎಲ್ಲವೂ ಇದೆ ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

  ನಮ್ಮ ಬಳಿ ಎಲ್ಲವೂ ಇದೆ

ಇಂದು ಬೆಳಿಗ್ಗೆಯಷ್ಟೆ ಪರಿಣೀತಿ ಚೋಪ್ರಾ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನದ ವೇಳೆಗೆ ಮಗು ಆಗಿದೆ.

 ಖಾಸಗಿ ಆಸ್ಪತ್ರೆಗೆ ದಾಖಲು