ತಾಯಿಯಾಗುತ್ತಿದ್ದಾರೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ

26 AUG 2025

By  Manjunatha

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ತಾಯಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಸುದ್ದಿ ಹಂಚಿಕೊಂಡಿದ್ದಾರೆ.

 ಬಾಲಿವುಡ್ ನಟಿ ಪರಿಣೀತಿ

ಪ್ರಿಯಾಂಕಾ ಚೋಪ್ರಾ ಸಹೋದರಿ ಆಗಿರುವ ಪರಿಣೀತಿ ಚೋಪ್ರಾ ಸಹ ಬಾಲಿವುಡ್​​ನಲ್ಲಿ ಹೆಸರು ಮಾಡಿರುವ ನಟಿ.

  ಪ್ರಿಯಾಂಕಾ  ಸಹೋದರಿ

ಪರಿಣೀತಿ ಚೋಪ್ರಾ, ಖ್ಯಾತ ರಾಜಕಾರಣಿ, ಮಾಜಿ ಸಚಿವ, ಹಾಲಿ ಸಂಸದ ರಾಘವ್ ಚಡ್ಡಾ ಅವರ ಪತ್ನಿ.

  ರಾಘವ್ ಚಡ್ಡಾ ಜೊತೆಗೆ

ಎಎಪಿಯ ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರುಗಳು 2023 ರಲ್ಲಿ ಅದ್ಧೂರಿಯಾಗಿ ವಿವಾಹವಾದರು.

 ಎಎಪಿಯ ರಾಘವ್ ಚಡ್ಡಾ

ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರುಗಳು ಕೆಲ ಕಾಲ ಪ್ರೀತಿಸಿ ಬಳಿಕ 2023 ರಲ್ಲಿ ಮದುವೆ ಆದರು.

       2023 ರಲ್ಲಿ ಮದುವೆ

ಮದುವೆ ಆದ ಬಳಿಕ ನಟಿ ಪರಿಣೀತಿ ಚೋಪ್ರಾ ಸಿನಿಮಾಗಳಿಂದ ಅಂತರ ಕಾಯ್ದುಕೊಂಡರು.

  ಸಿನಿಮಾಗಳಿಂದ ಅಂತರ

ಇತ್ತೀಚೆಗಷ್ಟೆ ಈ ಜೋಡಿ ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರ ಆಗುತ್ತಿರುವ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು.

    ಕಪಿಲ್ ಶರ್ಮಾ ಶೋಗೆ

ತಾಯಿ ಆಗುತ್ತಿರುವ ಪರಿಣೀತಿ ಚೋಪ್ರಾ, 1+1=3 ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡು, ಖುಷಿ ಹಂಚಿಕೊಂಡಿದ್ದಾರೆ.

 ಖುಷಿ ಹಂಚಿಕೊಂಡ ನಟಿ