ನನ್ನ ಜೀವನದ ಕಹಿ ಸತ್ಯ ಯಾರಿಗೂ ಗೊತ್ತಿಲ್ಲ, ಹೀಗ್ಯಾಕೆಂದರು ಪವಿತ್ರ ಗೌಡ

18 June 2025

By  Manjunatha

ರಾಣಿಯಂತೆ ಆರಾಮವಾಗಿ ಬಾಳುತ್ತಿದ್ದ ಪವಿತ್ರಾ ಗೌಡ, ರೇಣುಕಾ ಸ್ವಾಮಿ ಪ್ರಕರಣದ ಬಳಿಕ ವಿಲನ್​​ನಂತಾಗಿಬಿಟ್ಟಿದ್ದಾರೆ.

 ರೇಣುಕಾ ಸ್ವಾಮಿ ಪ್ರಕರಣ

ಪವಿತ್ರಾ ಗೌಡ ಇಂದಲೇ ದರ್ಶನ್ ಜೀವನ ಹಾಳಾಯ್ತು ಎಂಬಂತೆ ನರೆಟಿವ್ ಕಟ್ಟುವ ಪ್ರಯತ್ನ ಮಾಡಲಾಗುತ್ತಿದೆ.

ನರೆಟಿವ್ ಕಟ್ಟುವ ಪ್ರಯತ್ನ

ತನ್ನ ವಿರುದ್ಧ ಆನ್​ಲೈನ್​​ ಹಾಗೂ ಮಾಧ್ಯಮಗಳಲ್ಲಿ ನಡೆಯುತ್ತಿರುವ ದೂಷಣೆಯ ಬಗ್ಗೆ ಬಹುತೇಕ ಮೌನವಾಗಿದ್ದಾರೆ ಪವಿತ್ರಾ.

   ಆನ್​ಲೈನ್​​ , ಮಾಧ್ಯಮ

ಆದರೆ ಇದೀಗ ವಿಮರ್ಶಕಿ ಆಶಾದೇವಿ ಅವರು ತಮ್ಮ ಬಗ್ಗೆ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಆಡಿದ ಮಾತುಗಳ ವಿಡಿಯೋ ಹಂಚಿಕೊಂಡಿದ್ದಾರೆ.

     ವಿಮರ್ಶಕಿ ಆಶಾದೇವಿ

ಯಾರು ಯಾರನ್ನಾದರು ಮದುವೆ ಆಗಲಿ, ಅದು ಅವರ ಖಾಸಗಿ ವಿಷಯ, ಅದರ ಉಸಾಬರಿ ನಿಮಗ್ಯಾಕೆ ಎಂದು ಆಶಾದೇವಿ ಮಾಧ್ಯಮಗಳ ಪ್ರಶ್ನಿಸಿದ್ದರು.

ಮಾಧ್ಯಮಗಳ ಪ್ರಶ್ನಿಸಿದರು

ಪವಿತ್ರಾ ಎನ್ನುವ ಹೆಣ್ಣುಮಗಳ ವಿಷಯದಲ್ಲಿ ಎಷ್ಟು ಕೆಟ್ಟದಾಗಿ ನಡೆದುಕೊಂಡರು, ಪವಿತ್ರಾಳನ್ನು ಅಪವಿತ್ರಾ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು.

   ಅಪವಿತ್ರಾ ಎಂದಿದ್ದರು

ಆ ವಿಡಿಯೋ ಹಂಚಿಕೊಂಡಿರುವ ಪವಿತ್ರಾ, ನನ್ನ ಜೀವನದ ಕಹಿ ಸತ್ಯ ಗೊತ್ತಿಲ್ಲದೇ ನನ್ನನ್ನು ದೂಷಿಸಲಾಯ್ತು ಎಂದಿದ್ದಾರೆ.

      ಜೀವನದ ಕಹಿ ಸತ್ಯ

ಮಹಿಳೆ ಸಂಕಷ್ಟದಲ್ಲಿ ಇದ್ದಾಗಲಾದರೂ ಈ ಸಮಾಜ ಮತ್ತು ಮಾಧ್ಯಮ ಆಕೆಯ ಬಗ್ಗೆ ಗೌರವದಿಂದ ನಡೆದುಕೊಳ್ಳಲಿ ಎಂದಿದ್ದಾರೆ ಪವಿತ್ರಾ.

ಸಮಾಜ ಮತ್ತು ಮಾಧ್ಯಮ