ಮತ್ತೆ ಸದ್ದಿಲ್ಲದಾದ ಪೂಜಾ ಹೆಗ್ಡೆ, ಮತ್ತೆ ಕೈಕೊಟ್ಟಿತೆ ತೆಲುಗು ಚಿತ್ರರಂಗ

28 NOV 2025

By  Manjunatha

ಪೂಜಾ ಹೆಗ್ಡೆ, ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚಿದವರು, ಆದರೆ ಕೆಲವೇ ವರ್ಷಗಳಲ್ಲಿ ಪರಿಸ್ಥಿತಿ ಬದಲಾಯ್ತು.

      ದಕ್ಷಿಣದ ಸ್ಟಾರ್ ನಟಿ

ಕೋವಿಡ್​​ಗೆ ಮುಂಚೆ, ಕೋವಿಡ್ ಸಮಯದಲ್ಲಿಯೂ ಸಹ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದರು.

   ಟಾಪ್ ನಟಿಯಾಗಿದ್ದರು

ಆದರೆ ಹಠಾತ್ತನೆ ಅವರಿಗೆ ತೆಲುಗು ಚಿತ್ರರಂಗದಲ್ಲಿ ಅವಕಾಶಗಳೇ ನಿಂತು ಹೋದವು. ಪರೋಕ್ಷವಾಗಿ ಬ್ಯಾನ್ ಹೇರಲಾಯ್ತು.

    ತೆಲುಗು ಚಿತ್ರರಂಗದಲ್ಲಿ

ಪೂಜಾ ಹೆಗ್ಡೆ ತೆಲುಗು ಸಿನಿಮಾನಲ್ಲಿ ನಟಿಸಿ ನಾಲ್ಕು ವರ್ಷಗಳಾಯ್ತು. ಯಾವ ಅವಕಾಶವೂ ಅವರಿಗೆ ಸಿಕ್ಕಿರಲಿಲ್ಲ.

  ನಾಲ್ಕು ವರ್ಷಗಳಾಯ್ತು

ಇತ್ತೀಚೆಗೆ ದುಲ್ಕರ್ ಸಲ್ಮಾನ್ ನಟನೆಯ ಹೊಸ ತೆಲುಗು ಸಿನಿಮಾನಲ್ಲಿ ಪೂಜಾ ಹೆಗ್ಡೆಗೆ ಅವಕಾಶ ನೀಡಲಾಯ್ತು.

   ಹೊಸ ತೆಲುಗು ಸಿನಿಮಾ

ಅದರ ಬೆನ್ನಲ್ಲೆ ಮತ್ತೊಂದು ತೆಲುಗು ಸಿನಿಮಾದ ಅವಕಾಶವೂ ಸಹ ಪೂಜಾ ಹೆಗ್ಡೆಗೆ ದೊರಕಿತು ಎನ್ನಲಾಯ್ತು.

      ಸಿನಿಮಾದ ಅವಕಾಶ

ಆದರೆ ಅದು ಸುಳ್ಳಾಗಿದೆ. ಪೂಜಾ ಹೆಗ್ಡೆ ಕೈಸೇರಿದ್ದ ಹೊಸ ತೆಲುಗು ಸಿನಿಮಾ ಒಂದು ಮತ್ತೆ ಪೂಜಾ ಹೆಗ್ಡೆ ಕೈತಪ್ಪಿದೆ.

   ಪೂಜಾ ಹೆಗ್ಡೆ ಕೈತಪ್ಪಿದೆ

ಪೂಜಾ ಹೆಗ್ಡೆ ಇದೀಗ ತಮಿಳಿನ ಎರಡು ಸಿನಿಮಾ, ಹಿಂದಿಯ ಒಂದು ಸಿನಿಮಾ ಹಾಗೂ ತೆಲುಗಿನ ಒಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ತೆಲುಗಿನ ಒಂದು ಸಿನಿಮಾ