ನಾಲ್ಕು ವರ್ಷದ ಬಳಿಕ ತೆಲುಗಿಗೆ ಮರಳಿದ ಪೂಜಾ ಹೆಗ್ಡೆ

10 SEP 2025

By  Manjunatha

ಪೂಜಾ ಹೆಗ್ಡೆ ಖ್ಯಾತ ಪ್ಯಾನ್ ಇಂಡಿಯಾ ನಟಿ, ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಕೆಲ ವರ್ಷಗಳ ಹಿಂದೆ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದ ನಂಬರ್ 1 ನಟಿಯಾಗಿದ್ದರು.

ನಂಬರ್ 1 ನಟಿಯಾಗಿದ್ದರು

ಪ್ರಭಾಸ್, ಅಲ್ಲು ಅರ್ಜುನ್, ಜೂ ಎನ್​ಟಿಆರ್, ರಾಮ್ ಚರಣ್ ಅವರುಗಳಿಗೂ ನಾಯಕಿ ಆಗಿದ್ದರು.

ಸ್ಟಾರ್ ನಟರುಗಳ ನಾಯಕಿ

ಆದರೆ 2022 ರಲ್ಲಿ ‘ರಾಧೆ-ಶ್ಯಾಮ್’, ‘ಆಚಾರ್ಯ’ ಸಿನಿಮಾಗಳಲ್ಲಿ ನಟಿಸಿದ್ದರು. ಅವು ಅಷ್ಟು ಒಳ್ಳೆಯ ಪ್ರದರ್ಶನ ಕಾಣಲಿಲ್ಲ.

‘ರಾಧೆ-ಶ್ಯಾಮ್’ ‘ಆಚಾರ್ಯ’

ಆದರೆ 2022 ರ ಬಳಿಕ ಪೂಜಾ ಹೆಗ್ಡೆ ಅಚಾನಕ್ಕಾಗಿ ತೆಲುಗು ಚಿತ್ರರಂಗದಿಂದ ಮರೆ ಆಗಿಬಿಟ್ಟರು.

   ತೆಲುಗು ಚಿತ್ರರಂಗದಿಂದ

ಪೂಜಾ ಹೆಗ್ಡೆಯನ್ನು ಟಾಲಿವುಡ್​​ನಿಂದ ಅನಧಿಕೃತವಾಗಿ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು.

  ಅನಧಿಕೃತವಾಗಿ ಬ್ಯಾನ್?

ಆದರೆ ಇದೀಗ ಪೂಜಾ ಹೆಗ್ಡೆ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ಹೊಸ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ.

  ಚಿತ್ರರಂಗಕ್ಕೆ ಮರಳಿದ್ದಾರೆ

ದುಲ್ಕರ್ ಸಲ್ಮಾನ್ ನಾಯಕನಾಗಿ ನಟಿಸಲಿರುವ ಹೊಸ ಪ್ರೇಮಕಥಾ ಸಿನಿಮಾನಲ್ಲಿ ಪೂಜಾ ಹಗ್ಡೆ ನಾಯಕಿ.

ದುಲ್ಕರ್ ಸಲ್ಮಾನ್ ನಾಯಕಿ