ಹುಟ್ಟುಹಬ್ಬ ಆಚರಿಸಿಕೊಂಡ ಪೂಜಾ ಹೆಗ್ಡೆ, ನಟಿಯ ವಯಸ್ಸೆಷ್ಟು?

15 OCT 2025

By  Manjunatha

ಪೂಜಾ ಹೆಗ್ಡೆ ಕರ್ನಾಟಕ ಮೂಲದ ನಟಿ, ಆದರೆ ಮಿಂಚುತ್ತಿರುವುದು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ.

 ಕರ್ನಾಟಕ ಮೂಲದ ನಟಿ

ಮಂಗಳೂರು ಮೂಲದ ಪೂಜಾ ಹೆಗ್ಡೆ ಬೆಳೆದಿದ್ದೆಲ್ಲ ದೂರದ ಮುಂಬೈನಲ್ಲಿ. ಸಿನಿಮಾಕ್ಕೆ ಕಾಲಿಟ್ಟಿದ್ದೂ ಹಿಂದಿ ಸಿನಿಮಾ ಮೂಲಕ.

     ಮಂಗಳೂರು ಮೂಲ

ಆದರೆ ಪೂಜಾ ಹೆಗ್ಡೆಗೆ ಯಶಸ್ಸು ದೊರೆತಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗು ಹಾಗೂ ತಮಿಳಿನ ಬೇಡಿಕೆಯ ನಟಿಯಾಗಿದ್ದರು ಪೂಜಾ.

    ತೆಲುಗು ಚಿತ್ರರಂಗದಲ್ಲಿ

ಪೂಜಾ ಹೆಗ್ಡೆ ಎರಡು ದಿನದ ಹಿಂದೆಯಷ್ಟೆ ತಮ್ಮ ಆಪ್ತರ ಜೊತೆಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

    ಹುಟ್ಟುಹಬ್ಬ ಆಚರಣೆ

ಪೂಜಾ ಹೆಗ್ಡೆಗೆ ಇದು 35ನೇ ವರ್ಷದ ಹುಟ್ಟುಹಬ್ಬ. ನಟಿ ಜನಿಸಿದ್ದು 1990 ರ ಅಕ್ಟೋಬರ್ 13 ರಂದು.

     ನಟಿಯ ವಯಸ್ಸೆಷ್ಟು?

ಪೂಜಾ ಹೆಗ್ಡೆ ಇದೀಗ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷವೆಂದರೆ ಮತ್ತೆ ತೆಲುಗಿಗೆ ರೀ ಎಂಟ್ರಿ ನೀಡಿದ್ದಾರೆ.

      ತೆಲುಗಿಗೆ ರೀ ಎಂಟ್ರಿ

ಪೂಜಾ ಹೆಗ್ಡೆ ಇದೀಗ ಹಿಂದಿಯ ಒಂದು, ತಮಿಳಿನ ಎರಡು ಹಾಗೂ ತೆಲುಗಿನ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

 ಹಲವು ಸಿನಿಮಾ ಕೈಯಲ್ಲಿ

ಪೂಜಾ ಹೆಗ್ಡೆ ಸುಮಾರು ಐದು ವರ್ಷಗಳ ಬಳಿಕ ತೆಲುಗು ಚಿತ್ರರಂಗಕ್ಕೆ ರೀ ಎಂಟ್ರಿ ನೀಡಿದ್ದಾರೆ.

       ತೆಲುಗಿಗೆ ರೀ ಎಂಟ್ರಿ