ದಕ್ಷಿಣ ಭಾರತದಲ್ಲಿ ಪೂಜಾ ಹೆಗ್ಡೆಗೆ ನಿರಾಸೆಯ ಮೇಲೆ ನಿರಾಸೆ, ತಮಿಳು ಕೊನೆ ಭರವಸೆ

05 July 2025

By  Manjunatha

ಪೂಜಾ ಹೆಗ್ಡೆ ಕೆಲ ವರ್ಷಗಳ ಹಿಂದಿನ ವರೆಗೆ ತೆಲುಗು ಚಿತ್ರರಂಗದ ಬಲು ಬೇಡಿಕೆಯ ಮತ್ತು ದುಬಾರಿ ನಟಿ ಆಗಿದ್ದರು.

 ಬೇಡಿಕೆಯ ನಟಿ ಆಗಿದ್ದರು

ಆದರೆ ಏನಾಯ್ತೋ ಏನೋ ತೆಲುಗು ಸಿನಿಮಾಗಳಲ್ಲಿ ನಟಿಸುವುದನ್ನೇ ನಿಲ್ಲಿಸಿಬಿಟ್ಟರು ಪೂಜಾ ಹೆಗ್ಡೆ.

  ತೆಲುಗು ಸಿನಿಮಾಗಳಿಂದ...

ತೆಲುಗು ಚಿತ್ರರಂಗದವರು ಪೂಜಾ ಹೆಗ್ಡೆ ಮೇಲೆ ನಿಷೇಧ ಹೇರಿದ್ದಾರೆ ಎಂಬ ಸುದ್ದಿಯೂ ಸಹ ಸಣ್ಣಗೆ ಹರಿದಾಡುತ್ತಿದೆ.

    ಪೂಜಾ ಮೇಲೆ ನಿಷೇಧ?

ಅದಾದ ಬಳಿಕ ಪೂಜಾ ಹೆಗ್ಡೆ ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರಾದರೂ ಅಲ್ಲಿ ನಿರೀಕ್ಷಿತ ಗೆಲುವು, ಅವಕಾಶ ಸಿಗಲಿಲ್ಲ.

          ಅದೃಷ್ಟ ಪರೀಕ್ಷೆ

ಇದೀಗ ತಮಿಳು ಚಿತ್ರರಂಗದ ಕಡೆಗೆ ಪೂಜಾ ಹೆಗ್ಡೆ ತಿರುಗಿದ್ದು, ಸೂರ್ಯ ಜೊತೆ ರೆಟ್ರೊ ಸಿನಿಮಾನಲ್ಲಿ ನಟಿಸಿದರು. ಸಿನಿಮಾ ಫ್ಯಾಪ್ ಆಯ್ತು.

  ತಮಿಳು ಚಿತ್ರರಂಗದ ಕಡೆ

ಇದೀಗ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಐಟಂ ಹಾಡಿನಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

    ಐಟಂ ಹಾಡಿನಲ್ಲಿ ನಟಿ

ರಾಘವ್ ಲಾರೆನ್ಸ್ ನಟಿಸಿ, ನಿರ್ದೇಶನ ಮಾಡುತ್ತಿರುವ ಹಾರರ್ ಸಿನಿಮಾನಲ್ಲಿಯೂ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

 ರಾಘವ್ ಲಾರೆನ್ಸ್ ಜೊತೆಗೆ

ಬೇಡಿಕೆಯಲ್ಲಿದ್ದಾಗ ಹೀಗೆ ಐಟಂ ಹಾಡಿನಲ್ಲಿ, ರಾಘವ್ ಲಾರೆನ್ಸ್ ರೀತಿಯ ಬಿ ಅಥವಾ ಸಿ ಕ್ಯಾಟಗರಿ ನಾಯಕರ ಜೊತೆ ನಟಿಸುತ್ತಿರಲಿಲ್ಲ. ಆದರೆ ಈಗ ವಿಧಿಯಿಲ್ಲ.

 ಪೂಜಾಗೆ ಈಗ ವಿಧಿಯಿಲ್ಲ