‘ಮೋನಿಕಾ’ ಪೂಜಾ ಹೆಗ್ಡೆಗೆ ನಿಜ ಮೋನಿಕಾ ಇಂದ ಪ್ರಶಂಸೆ

12 AUG 2025

By  Manjunatha

ಪೂಜಾ ಹೆಗ್ಡೆ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ, ಅದಕ್ಕೆ ಕಾರಣ ‘ಮೋನಿಕಾ’

         ನಟಿ ಪೂಜಾ ಹೆಗ್ಡೆ 

‘ಕೂಲಿ’ ಸಿನಿಮಾನಲ್ಲಿ ಪೂಜಾ ಹೆಗ್ಡೆ ‘ಮೋನಿಕಾ’ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ಹಾಡು ವೈರಲ್ ಆಗಿದೆ.

 ಪೂಜಾ ಹೆಗ್ಡೆ ‘ಮೋನಿಕಾ’

ಇಟಲಿ ಮೂಲದ ಖ್ಯಾತ ಹಾಲಿವುಡ್ ನಟಿ ಮೋನಿಕಾ ಬೆಲೂಚಿ ಅವರು ‘ಮೋನಿಕಾ’ ಹಾಡು ನೋಡಿ ಹೊಗಳಿದ್ದಾರೆ.

ಹಾಲಿವುಡ್ ನಟಿ ಮೋನಿಕಾ

ಮರಾಕೆ ಫಿಲಂ ಫೆಸ್ಟ್​ನ ಮುಖ್ಯಸ್ಥ ಮಿಲಿಟಾ ಟೋಸ್ಕನ್, ಮೋನಿಕಾ ಬೆಲೂಚಿಗೆ ಪೂಜಾ ಹೆಗ್ಡೆಯ ‘ಮೋನಿಕಾ’ ಹಾಡು ತೋರಿಸಿದ್ದರಂತೆ.

 ‘ಮೋನಿಕಾ’ ನೋಡಿದ್ದಾರೆ

ಹಾಡು ನೋಡಿದ ಮೋನಿಕಾ ಬೆಲೂಚಿ ಹಾಡು ಸಖತ್ ಆಗಿದೆ ಎಂದಿದ್ದಲ್ಲದೆ ಪೂಜಾ ಹೆಗ್ಡೆಯ ಡ್ಯಾನ್ಸ್ ಅನ್ನು ಕೊಂಡಾಡಿದ್ದಾರೆ.

      ಹಾಡು ಸಖತ್ ಆಗಿದೆ

ಈ ವಿಷಯವನ್ನು ಸ್ವತಃ ಪೂಜಾ ಹೆಗ್ಡೆ ಹಾಲಿವುಡ್ ರಿಪೋರ್ಟರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ಪೂಜಾ ಹೆಗ್ಡೆ ಹೇಳಿದ್ದಾರೆ

ಖ್ಯಾತ ನಟಿ ಮೋನಿಕಾ ಬೆಲೂಚಿ ತಮ್ಮ ಹಾಡು ನೋಡಿ ಕೊಂಡಾಡಿರುವುದು ಪೂಜಾ ಹೆಗ್ಡೆಗೆ ಸಖತ್ ಖುಷಿ ನೀಡಿದೆ.

      ಮೋನಿಕಾ ಬೆಲೂಚಿ 

ಪೂಜಾ ಹೆಗ್ಡೆಯ ‘ಮೋನಿಕಾ’ ಹಾಡು ಯೂಟ್ಯೂಬ್​​ನಲ್ಲಿ ಸಖತ್ ವೈರಲ್ ಆಗಿದ್ದು, ಪೂಜಾ ಜೊತೆಗೆ ಸೌಬಿನ್ ಡ್ಯಾನ್ಸ್ ಸಹ ವೈರಲ್ ಆಗಿದೆ.

ಮೋನಿಕಾ ವೈರಲ್ ಆಗಿದೆ