35ರ ವಯಸ್ಸಲ್ಲಿ ಶಾಲಾ ಬಾಲಕಿ ಆದ ನಟಿ ಪೂಜಾ ಹೆಗ್ಡೆ

11 July 2026

By  Manjunatha

ಬಾಲಿವುಡ್​ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗಗಳಲ್ಲಿಯೂ ಸಕ್ರಿಯವಾಗಿರುವ ನಟಿ ಪೂಜಾ ಹೆಗ್ಡೆ.

  ಸ್ಟಾರ್ ನಟಿ ಪೂಜಾ ಹೆಗ್ಡೆ

15 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಪೂಜಾ ಹೆಗ್ಡೆಗೆ ಈಗ 35 ವರ್ಷ ವಯಸ್ಸು.

     15 ವರ್ಷಗಳಿಂದಲೂ

ಆದರೆ ಈಗಲೂ ಯಂಗ್ ಆಗಿ, ಫಿಟ್ ಆಗಿ ಮತ್ತು ಗ್ಲಾಮರಸ್ ಆಗಿಯೂ ಕಾಣುತ್ತಾರೆ ಪೂಜಾ ಹೆಗ್ಡೆ.

    ಫಿಟ್ ಮತ್ತು ಗ್ಲಾಮರಸ್

ಪೂಜಾ ಹೆಗ್ಡೆ ಇದೀಗ ಶಾಲಾ ಯುವತಿ ಲುಕ್​​ನಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

 ಶಾಲಾ ಯುವತಿ ಲುಕ್​​ನಲ್ಲಿ

ಪೂಜಾ ಹೆಗ್ಡೆ ಇದೀಗ ತೆಲುಗು ಸಿನಿಮಾ ಒಂದರಲ್ಲಿ ದುಲ್ಕರ್ ಸಲ್ಮಾನ್ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ.

  ದುಲ್ಕರ್ ಸಲ್ಮಾನ್ ಜೊತೆ

ಸಿನಿಮಾದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಪೋಸ್ಟರ್​​ನಲ್ಲಿ ಶಾಲಾ ಯುವತಿಯ ಪಾತ್ರದಲ್ಲಿ ಪೂಜಾ ಕಾಣಿಸಿಕೊಂಡಿದ್ದಾರೆ.

 ಶಾಲಾ ಯುವತಿಯ ಪಾತ್ರ

ಪೂಜಾ ಹೆಗ್ಡೆ ಶಾಲೆಯ ಯೂನಿಫಾರ್ಮ್ ತೊಟ್ಟು ಕಾಂಪೌಂಡ್ ಮೇಲೆ ಕೂತಿದ್ದಾರೆ. ಅವರೊಟ್ಟಿಗೆ ದುಲ್ಕರ್ ಸಹ ಇದ್ದಾರೆ.

 ಯೂನಿಫಾರ್ಮ್ ತೊಟ್ಟು

ಅಂದಹಾಗೆ ದಲ್ಕರ್ ಸಲ್ಮಾನ್ ಮತ್ತು ಪೂಜಾ ಹೆಗ್ಡೆ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾಕ್ಕೆ ‘ಶ್ರೀ ಶ್ರೀ’ ಎಂದು ಹೆಸರಿಡಲಾಗಿದೆ.

  ಸಿನಿಮಾ ಹೆಸರು ‘ಶ್ರೀ ಶ್ರೀ’