ಐದು ವರ್ಷದ ಬಳಿಕ ತೆಲುಗು ಸಿನಿಮಾ ಸಹಿ ಮಾಡಿದ ಪೂಜಾ ಹೆಗ್ಡೆ

12 July 2025

By  Manjunatha

ಪೂಜಾ ಹೆಗ್ಡೆ ಪ್ಯಾನ್ ಇಂಡಿಯಾ ನಟಿ. ಆದರೆ ಅವರು ಭಾರಿ ಜನಪ್ರಿಯತೆ ಗಳಿಸಿದ್ದು ತೆಲುಗು ಚಿತ್ರರಂಗದಲ್ಲಿ.

   ಪ್ಯಾನ್ ಇಂಡಿಯಾ ನಟಿ

ಕೋವಿಡ್​ಗೆ ಮುಂಚೆ ಸಹ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದ ಬಲು ಬೇಡಿಕೆಯ ಮತ್ತು ದುಬಾರಿ ನಟಿ ಆಗಿದ್ದರು.

     ದುಬಾರಿ ನಟಿ ಪೂಜಾ

ಪ್ರಭಾಸ್, ಅಲ್ಲು ಅರ್ಜುನ್, ಜೂ ಎನ್​ಟಿಆರ್, ರಾಮ್ ಚರಣ್ ಜೊತೆಗೆ ಒಂದರ ಹಿಂದೊಂದು ಸಿನಿಮಾನಲ್ಲಿ ಪೂಜಾ ನಟಿಸಿದ್ದರು.

ಸ್ಟಾರ್ ನಟರೊಟ್ಟಿಗೆ ನಟನೆ

ಆದರೆ ಹಠಾತ್ತನೆ ತೆಲುಗು ಚಿತ್ರರಂಗದಿಂದ ಪೂಜಾ ಹೆಗ್ಡೆ ದೂರಾದರು. ಒಂದೇ ಒಂದು ಸಿನಿಮಾ ಆಫರ್ ಸಹ ಅವರಿಗೆ ಸಿಗಲಿಲ್ಲ.

ಪೂಜಾ ಹೆಗ್ಡೆ ದೂರಾದರು

ಬರೋಬ್ಬರಿ ಐದು ವರ್ಷಗಳ ಕಾಲ ಪೂಜಾ ಹೆಗ್ಡೆಗೆ ಒಂದೇ ಒಂದು ತೆಲುಗು ಸಿನಿಮಾ ಆಫರ್ ಸಿಕ್ಕಿರಲಿಲ್ಲ.

ತೆಲುಗು ಸಿನಿಮಾ ಸಿಕ್ಕಿರಲಿಲ್ಲ

ಈಗ ಐದು ವರ್ಷಗಳ ಬಳಿಕ ಮತ್ತೆ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ನಟಿ. ಅದೂ ಹೊಸ ನಿರ್ದೇಶಕನ ಜೊತೆಗೆ.

     ಐದು ವರ್ಷಗಳ ಬಳಿಕ

ದುಲ್ಕರ್ ಸಲ್ಮಾನ್ ನಟಿಸಲಿರುವ ಸಿನಿಮಾನಲ್ಲಿ ಪೂಜಾ ನಾಯಕಿ. ಖ್ಯಾತ ನಿರ್ಮಾಣ ಸಂಸ್ಥೆಯ ಸಿನಿಮಾ ಇದಾಗಿರಲಿದೆ.

  ದುಲ್ಕರ್ ಸಲ್ಮಾನ್ ಜೊತೆ

ಪೂಜಾ ಹೆಗ್ಡೆ ಮೇಲೆ ಟಾಲಿವುಡ್ ನಿಷೇಧ ಹೇರಿದೆ ಎನ್ನಲಾಗಿತ್ತು. ಆ ನಿಷೇಧ ಈಗ ತೆರವಾದಂತಿದೆ.

       ಟಾಲಿವುಡ್ ನಿಷೇಧ