ಪವನ್ ಕಲ್ಯಾಣ್ ಸಿನಿಮಾಕ್ಕೆ ನಾಯಕಿಯಾದ ಪೂಜಾ ಹೆಗ್ಡೆ

08 July 2026

By  Manjunatha

ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ, ಸ್ಟಾರ್ ಪ್ಯಾನ್ ಇಂಡಿಯಾ ನಟಿ.

       ನಟಿ ಪೂಜಾ ಹೆಗ್ಡೆ

ಚಿತ್ರರಂಗಕ್ಕೆ ಕಾಲಿರಿಸಿದ್ದು ಹಿಂದಿ ಸಿನಿಮಾ ಮೂಲಕ ಆದರು, ಹೆಚ್ಚು ಮಿಂಚಿದ್ದು ದಕ್ಷಿಣದ ಸಿನಿಮಾಗಳಲ್ಲಿ.

 ಹಿಂದಿ ಸಿನಿಮಾ ಮೂಲಕ

ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ಮೆರೆದು, ಬಳಿಕ ಕಣ್ಮರೆ ಆಗಿದ್ದ ನಟಿ ಇದೀಗ ಮತ್ತೆ ತೆಲುಗಿಗೆ ಹಿಂದಿರುಗಿದ್ದಾರೆ.

      ಸ್ಟಾರ್ ನಟಿಯಾಗಿ

ಪೂಜಾ ಹೆಗ್ಡೆ ಈಗಾಗಲೇ ದುಲ್ಕರ್ ಸಲ್ಮಾನ್ ಜೊತೆಗೆ ಒಂದು ತೆಲುಗು ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  ದುಲ್ಕರ್ ಸಲ್ಮಾನ್ ಜೊತೆ

ಇದೀಗ ತೆಲುಗಿನ ಸ್ಟಾರ್ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಜೊತೆಗೆ ನಾಯಕಿ ಆಗಲಿದ್ದಾರೆ.

   ಪವನ್ ಕಲ್ಯಾಣ್ ಜೊತೆ

ಪವನ್ ಕಲ್ಯಾಣ್ ನಟಿಸಲಿರುವ ಆಕ್ಷನ್ ಸಿನಿಮಾ ‘ಓಜಿ 2’ನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರಂತೆ.

 ‘ಓಜಿ 2’ನಲ್ಲಿ ಪೂಜಾ ಹೆಗ್ಡೆ

ನಿರ್ದೇಶಕ ಸುಜೀತ್ ಅವರು ಈಗಾಗಲೇ ನಟಿ ಪೂಜಾ ಹೆಗ್ಡೆಗೆ ಕತೆ ಹೇಳಿದ್ದು, ಪೂಜಾ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

      ನಿರ್ದೇಶಕ ಸುಜೀತ್

ಅಂದಹಾಗೆ ಪೂಜಾ ಹೆಗ್ಡೆ ಪ್ರಸ್ತುತ ಒಂದು ತೆಲುಗು ಸಿನಿಮಾ, ಒಂದು ತಮಿಳು ಮತ್ತೊ ಒಂದು ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ಒಂದು ತೆಲುಗು ಸಿನಿಮಾ