ಮೂಲ ಮರೆಯದ ಪೂಜಾ ಹೆಗ್ಡೆ, ದೈವಾರಾಧನೆಯಲ್ಲಿ ಭಾಗಿ

29 APRL 2026

By  Manjunatha

ಪೂಜಾ ಹೆಗ್ಡೆ ಜನಪ್ರಿಯ ಪ್ಯಾನ್ ಇಂಡಿಯಾ ಸ್ಟಾರ್ ನಟಿಯರಲ್ಲಿ ಒಬ್ಬರು. ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಪೂಜಾ ಹೆಗ್ಡೆ ನೆಲೆಸಿರುವುದು ಮುಂಬೈನಲ್ಲಾದರೂ ಅವರ ಮೂಲ ಕರ್ನಾಟಕ. ಮಂಗಳೂರು ಮೂಲದ ನಟಿ ಅವರು.

 ಕರ್ನಾಟಕ ಮೂಲದ ನಟಿ

ತುಳು ಕುಟುಂಬದ ಕುಡಿ ಆಗಿರುವ ಪೂಜಾ ಹೆಗ್ಡೆ, ಚೆನ್ನಾಗಿ ತುಳು ಭಾಷೆ ಮಾತನಾಡಬಲ್ಲರು.

   ತುಳು ಕುಟುಂಬದ ಕುಡಿ

ಇದೀಗ ಅವರು ಕುಟುಂಬದ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಿದ್ದು, ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.

 ಧಾರ್ಮಿಕ ಆಚರಣೆಯಲ್ಲಿ

ಪೂಜಾ ಹೆಗ್ಡೆ ಅವರು ‘ನಾಗ ದರ್ಶನ’ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ದೈವಕ್ಕೆ ಕೈ ಮುಗಿದಿದ್ದಾರೆ.

   ‘ನಾಗ ದರ್ಶನ’ ಆಚರಣೆ

ಕರ್ನಾಟಕಕ್ಕೆ ಬಂದು ನೀರು ದೋಸೆ, ಉದ್ದಿನ ವಡೆ ಇನ್ನಿತರೆ ಸ್ಥಳೀಯ ಖಾದ್ಯಗಳನ್ನು ತಿಂದು ಖುಷಿ ಪಟ್ಟಿದ್ದಾರೆ.

      ಸ್ಥಳೀಯ ಖಾದ್ಯಗಳು

ಕೆಲವು ದೇವಾಲಯಗಳಿಗೆ ಸಹ ಪೂಜಾ ಹೆಗ್ಡೆ ಭೇಟಿ ನೀಡಿದ್ದು ಚಿತ್ರಗಳನ್ನು ಸಹ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

     ಪೂಜಾ ಹೆಗ್ಡೆ ಭೇಟಿ

ಪೂಜಾ ಹೆಗ್ಡೆ ಬಾಲಿವುಡ್​​ ಸೇರಿದಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಮೂಲವನ್ನು ಮರೆತಿಲ್ಲ.

   ಮೂಲವನ್ನು ಮರೆತಿಲ್ಲ