ಪ್ರಭಾಸ್ ಉಡುಗೊರೆ ಕೊಟ್ಟ ಸೀರೆ ಉಟ್ಟು ಮಿಂಚಿದ ನಟಿ ರಿಧಿ ಕುಮಾರ್

28DEC 2025

By  Manjunatha

ಪ್ರಭಾಸ್ ಬಹಳ ಸಂಕೋಚದ ವ್ಯಕ್ತಿತ್ವದವರು, ನಟಿಯರಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುತ್ತಾರೆ.

      ಕಾಯ್ದುಕೊಳ್ಳುತ್ತಾರೆ

ಹಾಗಾಗಿ ಪ್ರಭಾಸ್ ಅವರ ಹೆಸರು ಯಾವ ನಟಿಯರೊಟ್ಟಿಗೂ ಹೆಚ್ಚಾಗಿ ಕೇಳಿ ಬರುವುದಿಲ್ಲ.

ಹೆಚ್ಚಾಗಿ ಕೇಳಿ ಬರುವುದಿಲ್ಲ

ಆದರೆ ಇದೀಗ ಪ್ರಭಾಸ್ ಅವರು ನಟಿಯೊಬ್ಬರಿಗೆ ಸೀರೆಯೊಂದನ್ನು ಉಡುಗೊರೆ ನೀಡಿದ್ದಾರೆ. ಈ ಗುಟ್ಟನ್ನು ನಟಿಯೇ ಬಿಚ್ಚಿಟ್ಟಿದ್ದಾರೆ.

    ಉಡುಗೊರೆ ನೀಡಿದ್ದಾರೆ

‘ದಿ ರಾಜಾ ಸಾಬ್’ ಸಿನಿಮಾದ ನಟಿ ರಿಧಿ ಕುಮಾರ್ ಅವರಿಗೆ ಪ್ರಭಾಸ್ ವಿಶೇಷವಾದ ಸೀರೆಯೊಂದನ್ನು ಉಡುಗೊರೆ ಕೊಟ್ಟಿದ್ದಾರೆ.

  ಉಡುಗೊರೆ ಕೊಟ್ಟಿದ್ದಾರೆ

‘ದಿ ರಾಜಾ ಸಾಬ್’ ಇವೆಂಟ್​​ನಲ್ಲಿ ಈ ವಿಷಯವನ್ನು ನಟಿ ರಿಧಿ ಕುಮಾರ್ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

 ರಿಧಿ ಕುಮಾರ್ ಹೇಳಿದ್ದಾರೆ

‘ನೀವು ಮೂರು ವರ್ಷದ ಹಿಂದೆ ಕೊಟ್ಟ ಸೀರೆಯನ್ನು ಇಂದು ಉಟ್ಟುಕೊಳ್ಳಲು ಎತ್ತಿಟ್ಟಿದ್ದೆ. ನಿಮಗೆ ಧನ್ಯವಾದ’ ಎಂದಿದ್ದಾರೆ.

   ಮೂರು ವರ್ಷದ ಹಿಂದೆ

‘ನಿಮ್ಮಿಂದಲೇ ನಾನು ಇಲ್ಲಿದ್ದೇನೆ, ನೀವು ನನ್ನನ್ನು ಸಿನಿಮಾಕ್ಕೆ ಸೇರಿಸಿಕೊಂಡಿರಿ, ಅದಕ್ಕೆ ನಾನು ಋಣಿ’ ಎಂದಿದ್ದಾರೆ ರಿಧಿ.

ಸಿನಿಮಾಕ್ಕೆ ಸೇರಿಸಿಕೊಂಡಿರಿ

ರಿಧಿ ಕುಮಾರ್ ಪ್ರಭಾಸ್ ನಟನೆಯ ‘ರಾಧೆ-ಶ್ಯಾಮ್’ನಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಈಗ ಅವರ ಸಿನಿಮಾಕ್ಕೆ ನಾಯಕಿ.

       ‘ರಾಧೆ-ಶ್ಯಾಮ್’ನಲ್ಲಿ