ಮೊದಲ ಬಾರಿ ಸೈಫ್ ಜೊತೆ ನಟಿಸಲಿರುವ ಪ್ರಿಯಾಂಕಾ ಚೋಪ್ರಾ

01 OCT 2026

By  Manjunatha

ಪ್ರಿಯಾಂಕಾ ಚೋಪ್ರಾ, ಹಲವು ವರ್ಷಗಳ ಬಳಿಕ ಬಾಲಿವುಡ್​​ಗೆ ಮರಳುತ್ತಿದ್ದಾರೆ.

    ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಬಾಲಿವುಡ್​​ನಿಂದ ದೂರಾಗಿ ವರ್ಷಗಳೇ ಆಗಿವೆ. 2019 ರಲ್ಲಿ ಕೊನೆ ಬಾರಿ ಹಿಂದಿ ಸಿನಿಮಾನಲ್ಲಿ ಕಾಣಿಸಿಕೊಂಡಿದ್ದರು.

      ಹಿಂದಿ ಸಿನಿಮಾನಲ್ಲಿ

ಅದಾದ ಬಳಿಕ ಸಂಪೂರ್ಣವಾಗಿ ಅವರು ಹಾಲಿವುಡ್ ಸಿನಿಮಾಗಳಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದರು.

ಹಾಲಿವುಡ್ ಸಿನಿಮಾಗಳಲ್ಲೇ

ಇದೀಗ ತೆಲುಗಿನ ‘ವಾರಣಾಸಿ’ ಸಿನಿಮಾನಲ್ಲಿ ನಟ ಮಹೇಶ್ ಬಾಬು ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ.

  ಮಹೇಶ್ ಬಾಬು ಎದುರು

ಇದರ ಜೊತೆಗೆ ಏಳು ವರ್ಷಗಳ ಬಳಿಕ ಹಿಂದಿ ಸಿನಿಮಾನಲ್ಲಿ ನಟಿಸಲು ಪ್ರಿಯಾಂಕಾ ರೆಡಿ ಆಗಿದ್ದಾರೆ.

     ಏಳು ವರ್ಷಗಳ ಬಳಿಕ

ಇದೇ ಮೊದಲ ಬಾರಿಗೆ ಪ್ರಿಯಾಂಕಾ ಚೋಪ್ರಾ, ಸೈಫ್ ಅಲಿ ಖಾನ್ ಅವರೊಟ್ಟಿಗೆ ನಟನೆ ಮಾಡಲಿದ್ದಾರೆ.

   ಸೈಫ್ ಅಲಿ ಖಾನ್ ಜೊತೆ

ಇಬ್ಬರೂ ದಶಕಗಳಿಂದಲೂ ಚಿತ್ರರಂಗದಲ್ಲಿದ್ದರೂ ಒಟ್ಟಿಗೆ ಎಂದೂ ಸಹ ನಟಿಸಿರಲೇ ಇಲ್ಲ.

         ದಶಕಗಳಿಂದಲೂ

‘ಲಂಚ್ ಬಾಕ್ಸ್’ ನಿರ್ದೇಶಕ ರಿತೇಶ್ ಬಾತ್ರಾ ನಿರ್ದೇಶನ ಮಾಡಲಿರುವ ಸಿನಿಮಾನಲ್ಲಿ ಈ ಇಬ್ಬರೂ ನಟಿಸಲಿದ್ದಾರೆ.

  ನಿರ್ದೇಶನ ಮಾಡಲಿರುವ