ಮತ್ತೊಂದು ದಕ್ಷಿಣದ ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಿಯಾಂಕಾ ಚೋಪ್ರಾ

03 Apr 2025

By  Manjunatha

ಬಾಲಿವುಡ್​ ಬಿಟ್ಟು ಹಾಲಿವುಡ್​ಗೆ ಹಾರಿ ಅಲ್ಲಿಯೇ ಸೆಟಲ್ ಆಗಿರುವ ಪ್ರಿಯಾಂಕಾ ಇದೀಗ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದಿದ್ದಾರೆ.

ಹಾಲಿವುಡ್ ನಟಿ ಪ್ರಿಯಾಂಕ

ಪ್ರಿಯಾಂಕಾ ಅವರನ್ನು ಹಾಲಿವುಡ್​ನಿಂದ ಕರೆದುಕೊಂಡು ಬಂದಿರುವುದು ನಿರ್ದೇಶಕ ಎಸ್​ಎಸ್ ರಾಜಮೌಳಿ.

   ನಿರ್ದೇಶಕ  ರಾಜಮೌಳಿ

ರಾಜಮೌಳಿ ನಿರ್ದೇಶಿಸಿ ಮಹೇಶ್ ಬಾಬು ನಟಿಸುತ್ತಿರುವ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

   ಮಹೇಶ್ ಬಾಬು ಜೊತೆ

ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇನ್ನೂ ಒಂದು ವರ್ಷವಂತೂ ಈ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿ ಇರಲಿದೆ ಎನ್ನಲಾಗುತ್ತಿದೆ.

ಚಿತ್ರೀಕರಣ ಚಾಲ್ತಿಯಲ್ಲಿದೆ

ಇದರ ನಡುವೆ ಪ್ರಿಯಾಂಕಾ ಚೋಪ್ರಾಗೆ ಮತ್ತೊಂದು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವ ಅವಕಾಶ ಲಭ್ಯವಾಗಿದೆ ಎನ್ನಲಾಗುತ್ತಿದೆ.

 ದಕ್ಷಿಣ ಭಾರತದ ಸಿನಿಮಾ

ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

 ಅಲ್ಲು ಅರ್ಜುನ್ ಸಿನಿಮಾ

ಅಟ್ಲಿ-ಅಲ್ಲು ಅರ್ಜುನ್ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

      ಪ್ರಿಯಾಂಕಾ ನಾಯಕಿ

ಆದರೆ ಆ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಅಲ್ಲು ಅರ್ಜುನ್ ಸಹ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ಅಲ್ಲು ಅರ್ಜುನ್ ದ್ವಿಪಾತ್ರ

ಪ್ರಿಯಾಂಕಾ ಚೋಪ್ರಾ ಇದೀಗ ರಾಜಮೌಳಿ ಸಿನಿಮಾದ ಜೊತೆಗೆ ಹಾಲಿವುಡ್​ನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

 ಹಲವು ಸಿನಿಮಾ ಕೈಯಲ್ಲಿ