ಪ್ರಿಯಾಂಕಾ ಚೋಪ್ರಾ ದಕ್ಷಿಣದ ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಗೊತ್ತೆ?

14 NOV 2025

By  Manjunatha

ಪ್ರಿಯಾಂಕಾ ಚೋಪ್ರಾ ಕೇವಲ ಬಾಲಿವುಡ್​​ ನಟಿ ಮಾತ್ರವೇ ಅಲ್ಲ, ಅವರು ಹಾಲಿವುಡ್​​ನ ಖ್ಯಾತ ನಟಿ.

  ಹಾಲಿವುಡ್​​ನ ಖ್ಯಾತ ನಟಿ

ಆದರೆ ಪ್ರಿಯಾಂಕಾ ಚೋಪ್ರಾ ಅವರ ನಟನಾ ವೃತ್ತಿ ಆರಂಭವಾಗಿದ್ದು ತಮಿಳು ಸಿನಿಮಾದ ಮೂಲಕ.

     ಪ್ರಿಯಾಂಕಾ ಚೋಪ್ರಾ

ವಿಜಯ್ ನಟನೆಯ ‘ತಮಿಳನ್’ ಸಿನಿಮಾನಲ್ಲಿ ಪ್ರಿಯಾಂಕಾ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದರು.

  ‘ತಮಿಳನ್’ ಸಿನಿಮಾನಲ್ಲಿ

ಅದಾದ ಬಳಿಕ ಪ್ರಿಯಾಂಕಾಗೆ ಹಿಂದಿ ಅವಕಾಶ ದೊರಕಿತು, ಅದಾದ ಬಳಿಕ ನಡೆದಿದ್ದೆಲ್ಲ ಈಗ ಇತಿಹಾಸ.

ನಡೆದಿದ್ದೆಲ್ಲ ಈಗ ಇತಿಹಾಸ

ಆದರೆ ‘ತಮಿಳನ್’ ಪ್ರಿಯಾಂಕಾ ಚೋಪ್ರಾ ನಟನೆಯ ಏಕೈಕ ದಕ್ಷಿಣ ಭಾರತದ ಸಿನಿಮಾ ಅಲ್ಲ.

     ಏಕೈಕ ಸಿನಿಮಾ ಅಲ್ಲ

ಅದೇ ಸಮಯದಲ್ಲಿ ಪ್ರಿಯಾಂಕಾ ಚೋಪ್ರಾ ಒಂದು ತೆಲುಗು ಸಿನಿಮಾನಲ್ಲಿಯೂ ನಟಿಸಿದ್ದರು. ಆದರೆ ಆ ಸಿನಿಮಾ ರಿಲೀಸ್ ಆಗಲಿಲ್ಲ.

ತೆಲುಗು ಸಿನಿಮಾನಲ್ಲಿಯೂ

ಮಧುಕರ್ ಮತ್ತು ಪ್ರಸನ್ನ ಎಂಬ ಇಬ್ಬರು ನಾಯಕರು ನಟಿಸಿದ್ದ ತೆಲುಗು ಸಿನಿಮಾ ಒಂದರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು.

 ಮಧುಕರ್ ಮತ್ತು ಪ್ರಸನ್ನ

ಅದೊಂದು ತ್ರಿಕೋನ ಪ್ರೇಮಕತೆಯುಳ್ಳ ಸಿನಿಮಾ ಆಗಿತ್ತು, ಸಿನಿಮಾ ನಿರ್ದೇಶಿಸಿದ್ದು ಜಿಎಸ್ ರವಿಕುಮಾರ್ ಅವರು.

  ರವಿಕುಮಾರ್ ನಿರ್ದೇಶನ

ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವೂ ಆಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆ ಸಿನಿಮಾ ಬಿಡುಗಡೆ ಆಗಲಿಲ್ಲ.

ಸಿನಿಮಾ ಬಿಡುಗಡೆ ಆಗಲಿಲ್ಲ

ಇದೀಗ ಪ್ರಿಯಾಂಕಾ ಚೋಪ್ರಾ ರಾಜಮೌಳಿ ನಿರ್ದೇಶನದ ತೆಲುಗು ಪ್ಯಾನ್ ಇಂಡಿಯಾ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ರಾಜಮೌಳಿ ಸಿನಿಮಾನಲ್ಲಿ