ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಟ್ಟಿದ್ದು ಏಕೆ, ಅವರೇ ಕೊಟ್ಟ ಕಾರಣ ಇಲ್ಲಿದೆ

17 July 2025

By  Manjunatha

ಪ್ರಿಯಾಂಕಾ ಚೋಪ್ರಾ ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್​ನ ಸ್ಟಾರ್ ನಟಿಯಾಗಿ ಮೆರೆದವರು.

ಸ್ಟಾರ್ ನಟಿಯಾಗಿ ಮೆರೆದರು

ತಮಿಳು ಚಿತ್ರರಂಗದಿಂದ ಎಂಟ್ರಿ ಪಡೆದುಕೊಂಡರೂ ಸಹ ಬಲು ಬೇಗ ಬಾಲಿವುಡ್​ನ ಟಾಪ್ ನಟಿಯಾದರು.

 ಬಾಲಿವುಡ್​ನ ಟಾಪ್ ನಟಿ

ಶಾರುಖ್, ಸಲ್ಮಾನ್, ಅಕ್ಷಯ್ ಹಲವು ಖ್ಯಾತ ನಾಮ ಸ್ಟಾರ್ ನಟರುಗಳೊಟ್ಟಿಗೆ ಒಂದರ ಹಿಂದೊಂದು ಸಿನಿಮಾ ಮಾಡಿದರು.

   ಸ್ಟಾರ್ ನಟರುಗಳೊಟ್ಟಿಗೆ

ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ, ಅಭಿಮಾನಿಗಳು ಪ್ರೀತಿ ತೋರಿಸುತ್ತಿರುವ ಸಂದರ್ಭದಲ್ಲಿಯೇ ಪ್ರಿಯಾಂಕಾ ಬಾಲಿವುಡ್ ಬಿಟ್ಟು ಹೋದರು.

      ಬಾಲಿವುಡ್ ಬಿಟ್ಟರು

ಬಾಲಿವುಡ್​ ಬಿಟ್ಟು ಹಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾ ಸೆಟಲ್ ಆಗಿದ್ದಾರೆ. ಹಿಂದೊಮ್ಮೆ ಈ ನಿರ್ಧಾರಕ್ಕೆ ಕಾರಣ ಹೇಳಿದ್ದರು.

     ಪ್ರಿಯಾಂಕಾ ಚೋಪ್ರಾ 

ಬಾಲಿವುಡ್​ನಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗಿತ್ತು, ಕೆಲವರು ನನ್ನ ವಿರುದ್ಧ ಪಿತೂರಿ ಪ್ರಾರಂಭಿಸಿದ್ದರು ಎಂದಿದ್ದಾರೆ.

  ಮೂಲೆಗುಂಪು ಆಗಿದ್ದರು

ನನ್ನನ್ನು ಉದ್ದೇಶಪೂರ್ವಕವಾಗಿ ಸಿನಿಮಾಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ರಾಜಕೀಯ ಪ್ರಾರಂಭಿಸಿದ್ದರು. ಇದು ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.

 ನಟಿ ವಿರುದ್ಧ ರಾಜಕೀಯ

ಆ ರೀತಿಯ ರಾಜಕೀಯ ಆಟಗಳು ಆಡಲು ನನಗೆ ಬರಲಿಲ್ಲ ಹಾಗಾಗಿ ಇಂಡಸ್ಟ್ರಿಯನ್ನೇ ಬಿಟ್ಟು ಹೋದೆ ಎಂದಿದ್ದಾರೆ ಪ್ರಿಯಾಂಕಾ.

ಆಟಗಳು ಆಡಲು ಬರಲಿಲ್ಲ